*ವಾಲ್ಮೀಕಿ ಸಮಾಜ ಆರ್ಥಿಕ, ಶೈಕ್ಷಣಿಕವಾಗಿ ಬಲಿಷ್ಠಗೊಳ್ಳಲಿ: ಸಂಸದೆ ಪ್ರಿಯಂಕಾ ಜಾರಕಿಹೊಳಿ*
ವಾಲ್ಮೀಕಿ ಸಮಾಜದ ಸಮ್ಮೇಳನದಲ್ಲಿ ನೂತನ ಲೋಕಸಭಾ ಸದಸ್ಯೆ ಪ್ರಿಯಂಕಾ ಜಾರಕಿಹೊಳಿ ಸನ್ಮಾನ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ವಾಲ್ಮೀಕಿ ಸಮಾಜ ಬಾಂಧವರು ಸರ್ಕಾರದ ಯೋಜನೆಗಳನ್ನು ಸದ್ಬಳಿಕೆ ಮಾಡಿಕೊಳ್ಳುವ ಮೂಲಕ ಸಮಾಜವನ್ನು ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಬಲಿಷ್ಠಗೊಳ್ಳಬೇಕು ಎಂದು ಸಂಸದೆ ಪ್ರಿಯಂಕಾ ಜಾರಕಿಹೊಳಿ ಅವರು ಹೇಳಿದರು.
ನಗರದ ಕುಮಾರ ಗಂಧರ್ವ ಕಲಾಮಂದಿರದಲ್ಲಿ ಭಾನುವಾರ ಬೆಳಗಾವಿ ಜಿಲ್ಲೆ ವಾಲ್ಮೀಕಿ ಸಮಾಜ ವತಿಯಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ವಾಲ್ಮೀಕಿ ಸಮಾಜದ ಸಮ್ಮೇಳನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ನೂತನ ಲೋಕಸಭಾ ಸದಸ್ಯೆ ಪ್ರಿಯಂಕಾ ಜಾರಕಿಹೊಳಿ ಅವರು ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ವಾಲ್ಮೀಕಿ ಸಮಾಜ ಬಾಂಧವರು ತೀರ ಹಿಂದೆ ಉಳಿದಿದ್ದಾರೆ. ಹೀಗಾಗಿ ಅವರು ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕವಾಗಿ ಬೆಳಯಬೇಕು. ಪೋಷಕರು ಸಹ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಆಗ ಮಾತ್ರ ಸಮಾಜ ಎಲ್ಲ ಕ್ಷೇತ್ರಗಳಲ್ಲಿಯೂ ಬೆಳೆಯಲು ಅನುಕೂಲವಾಗುತ್ತದೆ ಎಂದರು.
ವಾಲ್ಮೀಕಿ ಸಮುದಾಯದ ಜನರು ಒಗ್ಗಟಾಗಿರಬೇಕು. ನಮ್ಮ ಮಕ್ಕಳ ಭವಿಷ್ಯಕ್ಕಾಗಿ ನಾವು ಶ್ರಮಿಸೋಣ. ಸಮುದಾಯ ಎಳಿಗೆ ಕಾಣಬೇಕಾದರೆ ಶಿಕ್ಷಣವೇ ಒಂದೇ ದಾರಿ, ಮಕ್ಕಳನ್ನು ದುಶ್ಚಟಗಳಿಗೆ ದೂಡುವ ವಾತಾವರಣ ನಿರ್ಮಾಣವಾಗಿದೆ. ಹೀಗಾಗಿ ಪೋಷಕರು ಇದನ್ನು ಸೂಕ್ಷ್ಮವಾಗಿ ಗಮಿಸಿ ಮಕ್ಕಳಿಗೆ ಸಂಸ್ಕಾರ, ಗುಣಮಟ್ಟ ಶಿಕ್ಷಣ ಕೊಡಿಸಬೇಕು. ಅವರು ಕೂಡ ಒಳ್ಳೆಯ ಹುದ್ದೆಗಳನ್ನು ಅಲಂಕರಿಸಬೇಕು ಎಂದು ಹೇಳಿದರು.
ಮಹಾರಾಷ್ಟ್ರ ರಾಜ್ಯ ಆದ್ಯಕ್ರಾಂತಿವೀರ ನರವೀರ ರಾಜೇ ಉಮಾಜಿ ನಾಯಿಕ ಸಮಾಜ ಸುಧಾರಕ ಮಂಡಳಿ ವಂಸತರಾವ್ ಚವ್ಹಾಣ ಅವರು ಮಾತನಾಡಿ, ಹಿಂದುಳಿದ ಸಮಾಜದ ಧ್ವನಿಯಾಗಿರುವ ಸಚಿವ ಸತೀಶ ಜಾರಕಿಹೊಳಿ ಅವರು ವಾಲ್ಮೀಕಿ ಸಮುದಾಯದ ಪ್ರಗತಿಗೆ ಹಗಲಿರುಳು ಶ್ರಮಿಸಿದ್ದಾರೆ. ಅವರ ಪುತ್ರಿ ಪ್ರಿಯಂಕಾ ಜಾರಕಿಹೊಳಿ ಲೋಕಸಭಾ ಸದಸ್ಯೆಯಾಗಿ ಸಂಸತ ಪ್ರವೇಶ ಮಾಡಿರುವುದು ಅತೀವ ಸಂಸತವಾಗಿದೆ. ತಂದೆಯಂತೆ ನೀವು ಕೂಡ ವಾಲ್ಮೀಕಿ ಸಮುದಾಯನ್ನು ಇನ್ನಷ್ಟೂ ಬಲಿಷ್ಠಗೊಳಿಸಬೇಕು. ವಾಲ್ಮೀಕಿ ಸಮಾಜ ಜನರು ಗಟ್ಟಿಯಾಗಿ ನಿಲ್ಲೋಣ, ಸಚಿವ, ಸಂಸದೆ ಯವರಿಗೆ ಸಹಕಾರ ನೀಡೋಣ ಎನ್ನುತ್ತ, ಈ ಭಾಗದ ಪ್ರಭಾವಿ ನಾಯಕ ಸತೀಶ ಜಾರಕಿಹೊಳಿ ಅವರು ಸಿಎಂ ಆಗುವ ಕಾಲ.. ಕೂಡಿ ಬಂದಿದೆ. ಸಧ್ಯದಲ್ಲೇ ನಮಗೆ ಸಿಹಿ ಸುದ್ದಿ ನೀಡಲಿದ್ದಾರೆ ಎಂದರು. ಈ ವೇಳೆ ಅಭಿಮಾನಿಗಳು ಸಹ ಧ್ವನಿಗೂಡಿಸಿ ಮುಂದಿನ ಸಿಎಂ ಸತೀಶ ಜಾರಕಿಹೊಳಿ ಅವರು ಎಂದು ಸಮ್ಮೇಳದಲ್ಲಿ ಘೋಷಣೆ ಮೊಳಗಿಸಿದರು.
ಜಿಲ್ಲಾ ವಾಲ್ಮೀಕಿ ಸಮಾಜದ ಅಧ್ಯಕ್ಷ ರಾಜಶೇಖರ ತಳವಾರ ಪ್ರಾಸ್ತಾವಿಕವಾಗಿ ಮಾತನಾಡಿ, ತೀರ ಕೆಳಮಟ್ಟದ ಸಮುದಾಯಕ್ಕೆ ಮರು ಜೀವ ಕೊಟ್ಟವರು ಸತೀಶ ಜಾರಕಿಹೊಳಿ ಅವರು, ಕಾಡಿನಲ್ಲಿದ್ದ ಜನರನ್ನು ನಾಡಿನಲ್ಲಿ ಬೆಳೆಸಲು ಸಚಿವರು ಬಹಳಷ್ಟು ಶ್ರಮಿಸಿದ್ದಾರೆ. ನಮ್ಮನ್ನು ಆರ್ಥಿಕ, ಶೈಕ್ಷಣಿಕವಾಗಿ ಬೆಳೆಸಲು 1999 ರಲ್ಲಿ ಶಾಲೆಗಳನ್ನು ಆರಂಭಿಸಿದ ಮಹಾನ ಚೇತನ ಅವರು, ಶಾಲೆಗಳನ್ನು ಆರಂಭಿಸಲು ಸಾಕಷ್ಟು ನೋವನ್ನು ಅನುಭವಿಸಿ, ಕಷ್ಟಗಳನ್ನು ಮೆಟ್ಟಿ ನಿಂತು ಬೆಳೆದಿದ್ದಾರೆ, ಸಮುದಾಯದ ಜನರನ್ನು ಬೆಳೆಸುತ್ತಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಪಂ ಹಣಕಾಸು ಅಧಿಕಾರಿ ಪರಶುರಾಮ ದುಡಗುಂಡಿ, ಮಹಿಳಾ ಘಟಕದ ಅದ್ಯಕ್ಷೆ ಶೋಭಾ ನಿಂಗಾಣಿ, ಅಕವಾನಾ ಮಹಾಸಭಾ ಅಧ್ಯಕ್ಷ ಪಾಡುರಂಗ ನಾಯಿಕ, ಅಶೋಕ ನಾಯಕ್, ದಿನೇಶ ಬಾಗಡೆ, ಸಂಜಯ ನಾಯಕ, ನಾಗೇಂದ್ರ ನಾಯಕ, ಸಂಗೀತಗಾರ್ತಿ ರೂಪಾ ಖಡಗಾಂವಿ, ದಿವ್ಯಾ ಸೋನ್ನದ, ಕಾಂಗ್ರೆಸ್ ಮುಖಂಡರು ಅಮೀತ ರಜಪೂತ , ಶಿವರಾಜ ಕಣವಿ, ನಂದಾ ನಾಯಕ, ಭಾರತಿ ನಾಯಕ, ಶರಣಪ್ಪ ನಾಯಕ, ಚಬನ್ನಾ ಹೊಸಮನಿ, ಖೂತಿಕಾ ನಾಯಕ, ಕೃಷ್ಣಾ ನಾಯಕ, ಸುರೇಶ ಗೌವನ್ನವರ, ಸಚಿವರ ಆಪ್ತ ಸಹಾಯಕ ಅರವಿಂದ ಕಾರ್ಚಿ , ಮಲಗೌಡ ಪಾಟೀಲ, ಎಂ ಜೆ ಪ್ರದೀಪ್, ಎಸ್ ಎಸ್ ನಾಯಕ, ಹರ್ಷ ಚವ್ಹಾಣ , ವಿಸಾಯ ನಾಯಕ, ಪ್ರಶಾಂತ ನಾಯಿಕ,
ಶಿಕ್ಷಕರು ನಿಜಲಿಂಗಯ್ಯಾ ಹಾಲದೇವರಮಠ ಹಾಗೂ ಸುನಿತಾ ದೇಸಾಯಿ ನಿರೂಪಿಸಿ, ವಂದಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ