ಪ್ರಗತಿವಾಹಿನಿ ಸುದ್ದಿ: ಕೋಲಿಹಾನ್ ಜಿಲ್ಲೆಯ ಹಿಂದೂಸ್ತಾನ್ ಕಾಪರ್ ಲಿಮಿಟೆಡ್‍ನ ಗಣಿಯಲ್ಲಿ ಲಿಫ್ಟ್‌ನ ಹಗ್ಗ ತುಂಡಾಗಿ ಭಾರೀ ಅವಘಡ ಸಂಭವಿಸಿದೆ. ಲಿಫ್ಟ್‌ನಲ್ಲಿದ್ದ 12 ಜನ ಸೇರಿದಂತೆ ಒಟ್ಟು 14 ಜನರು ಸಿಲುಕಿದ್ದು, ರಕ್ಷಣಾ ಕಾರ್ಯ ಮುಂದುವರಿದಿದೆ.
ನಿನ್ನೆ ರಾತ್ರಿ ಈ ಅವಘಡ ಸಂಭವಿಸಿದ್ದು, ಕೋಲ್ಲತ್ತದಿಂದ ಆಗಮಿಸಿದ್ದ ವಿಜಿಲೆನ್ಸ್ ತಂಡ ಹಾಗೂ ಹಿಂದೂಸ್ತಾನ್ ಕಾಪರ್ ಲಿಮಿಟೆಡ್‍ನ ಹಲವು ಅಧಿಕಾರಿಗಳು ಲಿಫ್ಟ್‌ನಲ್ಲಿ ಸಿಲುಕಿದ್ದಾರೆ. ಅಧಿಕಾರಿಗಳು ಗಣಿಯಿಂದ ಮೇಲಕ್ಕೆ ಬರಲು ಲಿಫ್ಟ್ ಬಳಸಿದ್ದಾರೆ. ಈ ವೇಳೆ ಲಿಫ್ಟ್‌ನ ಹಗ್ಗ ತುಂಡಾಗಿದೆ. ಅಲ್ಲದೇ, ಅಧಿಕಾರಿಗಳನ್ನು ಮೇಲಕ್ಕೆ ಕರೆತರಲು ಬಳಸಲಾದ ಲಿಫ್ಟ್‌ನ ಮೇಲ್ಚಾವಣಿ ಕುಸಿದಿದ್ದು ಒಟ್ಟು 14 ಜನರು ನೂರಾರು ಮೀಟರ್ ಆಳದಲ್ಲಿ ಸಿಲುಕಿಕೊಂಡಿದ್ದಾರೆ.
ಘಟನೆ ನಡೆದು 7-8 ಗಂಟೆಗಳಾಗಿದ್ದು, ರಕ್ಷಣಾ ಕಾರ್ಯಚರಣೆ ನಡೆಯುತ್ತಿದೆ. ಆಂಬ್ಯುಲೆನ್ಸ್ ಗಳು ಸ್ಥಳಕ್ಕೆ ಆಗಮಿಸಿದ್ದು, ವೈದ್ಯರು ಕೂಡ ಘಟನಾ ಸ್ಥಳದಲ್ಲಿದ್ದಾರೆ. ಬಿಜೆಪಿ ಶಾಸಕ ಧರ್ಮಪಾಲ್ ಗುರ್ಜಾರ್ ಅವರು ಸ್ಥಳದಲ್ಲಿದ್ದು, ಇದುವರೆಗೆ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ