Kannada NewsKarnataka News

*ಪ್ರೀತಿಸಿ ಮದುವೆಯಾದ ಜೋಡಿ ಆತ್ಮಹತ್ಯಗೆ ಶರಣು*

ಪ್ರಗತಿವಾಹಿನಿ ಸುದ್ದಿ: ನವ ವಿವಾಹಿತ ಜೋಡಿ ನೇಣಿಗೆ ಶರಣಾಗಿರುವ ಘಟನೆ ವಿಜಯಪುರ ‌ನಗರದ ಹೊರ ಭಾಗದ ಶ್ರೀ ಸಿದ್ದೇಶ್ವರ ಬಡಾವಣೆಯ  ಮನೆಯಲ್ಲಿ ನಡೆದಿದೆ‌. 

Home add -Advt

ಮನೋಜಕುಮಾರ ಪೋಳ (30) ರಾಖಿ (23) ನೇಣಿಗೆ ಶರಣಾದ ಜೋಡಿ. ಇವರಿಬ್ಬರೂ ಕಳೆದ ನಾಲ್ಕು ತಿಂಗಳ ಹಿಂದೆ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ನಿನ್ನೆ ತಡರಾತ್ರಿ ಊಟ ಮಾಡಿದ ಬಳಿಕ ನೇಣಿಗೆ ಶರಣಾಗಿದ್ದಾರೆ. ಮನೋಜಕುಮಾರ ಹಾಗೂ ರಾಖಿ ಇಬ್ಬರೇ ಮನೆಯಲ್ಲಿದ್ದ ವೇಳೆ ಘಟನೆ ನಡೆದಿದೆ. 

ಮನೋಜಕುಮಾರ ತಾಯಿ ಭಾರತಿ ಮಗಳ ಊರಿಗೆ ಹೋಗಿದ್ದರು. ಇಂದು‌ ಬೆಳಿಗ್ಗೆ ವಾಪಸ್ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಜಲನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜಲನಗರ ಪೊಲೀಸ್ ಠಾಣಾ ವ್ಯಾಪ್ತಿ ಘಟನೆ ನಡೆದಿದೆ. ಪೊಲೀಸರ ತನಿಖೆ ಬಳಿಕ ಪತಿ-ಪತ್ನಿ ಆತ್ಮಹತ್ಯೆ ಕಾರಣ ತಿಳಿದು ಬರಲಿದೆ.

Related Articles

Back to top button