Kannada NewsKarnataka NewsLatest

*ಹುಬ್ಬಳ್ಳಿಯಲ್ಲಿ ಮತ್ತೊಂದು ಘೋರ ಕೃತ್ಯ; ನೇಹಾ ಮಾದರಿಯಲ್ಲಿಯೇ ಇನ್ನೊಂದು ಬರ್ಬರ ಹತ್ಯೆ*

ಪ್ರಗತಿವಾಹಿನಿ ಸುದ್ದಿ: ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಪ್ರಕರಣ ಮಾಸುವ ಮುನ್ನವೇ ಹುಬ್ಬಳ್ಳಿಯಲ್ಲಿ ಅಂತದ್ದೇ ಮತ್ತೊಂದು ಘಟನೆ ನಡೆದಿದೆ. ನಸುಕಿನ ಜಾವ ನಿದ್ದೆಯಲ್ಲಿದ್ದ ಯುವತಿಯನ್ನು ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ.

Home add -Advt

ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸ್ ಠಾಣೆ ವ್ಯಾಪ್ತಿಯ ವಿಜಾಪುರ ಓಣಿಯಲ್ಲಿ ಘಟನೆ ನಡೆದಿದೆ. ವಿಶ್ವ ಅಲಿಯಾಸ್ ಗಿರೀಶ್ ಕೊಲೆ ಆರೋಪಿ.

ಇಂದು ಮುಂಜಾನೆ 5:30ರ ಸುಮಾರಿಗೆ ಮನೆಗೆ ನುಗ್ಗಿದ ದುಷ್ಕರ್ಮಿ ಯುವತಿಯನ್ನು ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿದ್ದಾನೆ. ಅಂಜಲಿ ಮೃತ ಯುವತಿ. ಇದಕ್ಕೂ ಮುನ್ನ ಆರೋಪಿ ವಿಶ್ವ, ಅಂಜಲಿಗೆ ಮೈಸೂರಿಗೆ ಬರುವಂತೆ ಹೇಳಿದ್ದ. ಒಂದುವೇಳೆ ನೀನು ನನ್ನ ಜೊತೆ ಬರದಿದ್ದರೆ ನಿರಂಜನ ಹಿರೇಮಠ ಮಗಳಿಗೆ ಆದ ಹಾಗೇಯೇ ನಿನಗೂ ಮಾಡುತ್ತೇನೆ ಎಂದು ಬೆದರಿಸಿದ್ದ.

ವಿಶ್ವ ಎಂಬಾತ ತನ್ನ ಮೊಮ್ಮಗಳು ಅಂಜಲಿಗೆ ಬೆದರಿಕೆ ಹಾಕುತ್ತಿದ್ದಾನೆ ಎಂದು ಅಜ್ಜಿ ಗಂಗಮ್ಮ ಪೊಲೀಸರಿಗೆ ದೂರು ನೀಡಿದ್ದರು. ಅಜ್ಜಿಯ ಮಾತನ್ನು ಅಷ್ಟು ಗಂಭೀರವಾಗಿ ಪರಿಗಣಿಸದ ಪೊಲೀಸರು ಇದೆಲ್ಲ ಮೂಡನಂಬಿಕೆ ಎಂದು ಹೇಳಿ ಅಜ್ಜಿಯನ್ನು ಕಳುಹಿಸಿದ್ದರು. ಪೊಲೀಸರ ನಿರ್ಲಕ್ಷ್ಯಕ್ಕೆ ಇದೀಗ ಮತ್ತೊಂದು ಯುವತಿ ಬಲಿಯಾಗಿ ಹೋಗಿದ್ದಾಳೆ. ಆರೋಪಿ ವಿಶ್ವ ತಲೆಮರೆಸಿಕೊಂಡಿದ್ದಾನೆ.

Related Articles

Back to top button