Kannada NewsKarnataka NewsLatest

*ಗ್ರಾಮಾನುಭವ ಕಾರ್ಯಕ್ರಮ ರಾಜ್ಯಾದ್ಯಂತ ಅನುಷ್ಠಾನ: ಸರ್ಕಾರ ಆದೇಶ*

ಪ್ರಗತಿವಾಹಿನಿ ಸುದ್ದಿ: ‘ಗ್ರಾಮಾನುಭವ’ ಕಾರ್ಯಕ್ರಮ ರಾಜ್ಯಾದ್ಯಂತ ಅನುಷ್ಠಾನಗೊಳಿಸಲು ಸರ್ಕಾರ ಆದೇಶಿಸಿದೆ.

ʻನೀವು ತಿನ್ನುವ ಅನ್ನವನ್ನು ಮಾಡುವ ಅಕ್ಕಿ ಎಲ್ಲಿಂದ ಬರುತ್ತದೆ, ಭತ್ತ ಗಿಡದಲ್ಲಿ ಬಿಡುತ್ತೋ, ಮರದಲ್ಲಿ ಬಿಡುತ್ತೋ…ʼ ಎಂದು ನಗರಗಳಲ್ಲಿ ಓದುವ ವಿದ್ಯಾರ್ಥಿಗಳನ್ನು ಕೇಳಿದರೆ ಉತ್ತರ ಗೊತ್ತಿರುವುದಿಲ್ಲ ಎಂದು ನಾವು ಮಾತನಾಡಿಕೊಳ್ಳುವುದುಂಟು. ನಮ್ಮ ದೇಶ ಈಗ ʻಗ್ರಾಮೀಣ ಭಾರತʼ, ʻನಗರ ಭಾರತʼ ಎಂದು ಎರಡು ಭಾಗಗಳಾಗಿವೆ. ಇದರ ನಡುವಿನ ಕಂದಕ ದಿನದಿಂದ ದಿನಕ್ಕೆ ಆಳವಾಗುತ್ತಿದೆ, ಅಗಲವಾಗುತ್ತಿದೆ.

Home add -Advt


ನಮ್ಮ ನಗರಗಳ ವಿದ್ಯಾರ್ಥಿಗಳನ್ನು ಗ್ರಾಮೀಣ ಭಾರತದ ಬೇರುಗಳಿಗೆ ಜೋಡಿಸಿ ಈ ಕಂದಕವನ್ನು ಮುಚ್ಚುವ ಉದ್ದೇಶದಿಂದ ನಮ್ಮ ಸರ್ಕಾರವು ʻಗ್ರಾಮಾನುಭವʼ ಎಂಬ ಯೋಜನೆನ್ನು ಜಾರಿಗೆ ತರುತ್ತಿದೆ.

ಈ ಯೋಜನೆಯಡಿ ಜಿಲ್ಲಾ ಕೇಂದ್ರಗಳ ವ್ಯಾಪ್ತಿಯಲ್ಲಿರುವ ನಗರ ಪ್ರದೇಶದ ಸರ್ಕಾರಿ ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 8, 9 ಮತ್ತು 11 ನೇ ತರಗತಿಯ ವಿದ್ಯಾರ್ಥಿಗನ್ನು ಹಳ್ಳಿಗಳಿಗೆ ಕರೆದುಕೊಂಡು ಹೋಗಿ ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಕಲೆ ಮತ್ತು ಸಂಸ್ಖೃತಿ ಸೇರಿದಂತೆ ಗ್ರಾಮೀಣ ಜೀವನದ ವಿಶಿಷ್ಟ ಅನುಭವ ಒದಗಿಸಲಾಗುತ್ತದೆ.

ಒಂದು ರಾತ್ರಿ ಸೇರಿದಂತೆ ಎರಡು ದಿನಗಳ ಕಾಲ ಗ್ರಾಮದಲ್ಲಿಯೇ ಉಳಿದುಕೊಳ್ಳುವ ಮಕ್ಕಳಿಗೆ ಗ್ರಾಮೀಣದ ಜನಜೀವನದ ಬಗ್ಗೆ, ಕೃಷಿ ಚಟುವಟಿಕೆಗಳ ಬಗ್ಗೆ, ಸಾಂಸ್ಕೃತಿಕ ಜಗತ್ತಿನ ಬಗ್ಗೆ ಮಾಹಿತಿ ನೀಡಲಾಗುತ್ತದೆ. Exposure Visit Framework ಅಡಿಯಲ್ಲಿ ಈ ಕಾರ್ಯಕ್ರಮವನ್ನು ನಾವು ರೂಪಿಸಿದ್ದೇವೆ. ಪ್ರತಿ ಶೈಕ್ಷಣಿಕ ಸಾಲಿನಲ್ಲಿಯೂ ಸೆಪ್ಟೆಂಬರ್‌ ನಿಂದ ಡಿಸೆಂಬರ್‌ ಒಳಗೆ ಈ ಕಾರ್ಯಕ್ರಮವನ್ನು ಜಾರಿಗೆ ತರಲಾಗುತ್ತದೆ.

ಜನವರಿ ಅಥವಾ ಫೆಬ್ರವರಿಯಲ್ಲಿಈ ಭೇಟಿ ಕುರಿತು ಶಾಲಾ ಮಟ್ಟದ ಸಂವಹನ ಚಟುವಟಿಕೆಗಳನ್ನು ನಡೆಸಬೇಕೆಂದು ಸೂಚಿಸಲಾಗಿದೆ.

ಮೊದಲಿಗೆ ರಾಜ್ಯದ ಒಟ್ಟು 160 ಸರ್ಕಾರಿ ಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ಅಂದಾಜು 2.46 ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ. ನಗರ ಪ್ರದೇಶದ ಎಲ್ಲಾ ಪಿಎಂಶ್ರೀ ಮತ್ತು ಕೆಪಿಎಸ್‌ ಶಾಲೆಗಳಲ್ಲಿಯೂ ಈ ಯೋಜನೆ ಜಾರಿಗೆ ಬರಲಿದೆ.

ಮಾನ್ಯ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ನೇತೃತ್ವದ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು ನೂರು ದಿನಗಳಾಗುತ್ತಿರುವ ಈ ಹೊತ್ತಿನಲ್ಲಿ ಈ ಯೋಜನೆಯನ್ನು ಪ್ರಕಟಿಸುತ್ತಿದ್ದೇವೆ.

ನಮ್ಮ ದೇಶ ಈಗ ʻಗ್ರಾಮೀಣ ಭಾರತʼ, ʻನಗರ ಭಾರತʼ ಎಂದು ಎರಡು ಭಾಗಗಳಾಗಿವೆ. ಇದರ ನಡುವಿನ ಕಂದಕ ದಿನದಿಂದ ದಿನಕ್ಕೆ ಆಳವಾಗುತ್ತಿದೆ, ಅಗಲವಾಗುತ್ತಿದೆ. ನಮ್ಮ ನಗರಗಳ ವಿದ್ಯಾರ್ಥಿಗಳನ್ನು ಗ್ರಾಮೀಣ ಭಾರತದ ಬೇರುಗಳಿಗೆ ಜೋಡಿಸಿ ಈ ಕಂದಕವನ್ನು ಮುಚ್ಚುವ ಉದ್ದೇಶದಿಂದ ನಮ್ಮ ಸರ್ಕಾರವು ʻಗ್ರಾಮಾನುಭವʼ ಎಂಬ ಯೋಜನೆನ್ನು ಜಾರಿಗೆ ತರುತ್ತಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.

Related Articles

Back to top button