Kannada NewsKarnataka News

ಸಿಡಿಲಿಗೆ 20 ಕುರಿ ಹಾಗೂ ಕುರಿಗಾಹಿ ಸಾವು

ಪ್ರಗತಿವಾಹಿನಿ ಸುದ್ದಿ: ಮೇಕೆ ಮೇಯಿಸುತ್ತಿದ್ದ ವೇಳೆ ಕುರಿಗಾಹಿ ಹಾಗೂ 20 ಮೇಕೆಗಳು ಸಿಡಿಲು ಬಡಿದು ಸಾವನ್ನಪ್ಪಿರುವ ಘಟನೆ ವಿಜಯಪುರ ಜಿಲ್ಲೆಯ ಬಬಲೇಶ್ವರದಲ್ಲಿ ನಡೆದಿದೆ.

ಬಬಲೇಶ್ವರದ  ಕಾಖಂಡಕಿ ಗ್ರಾಮದ ಹೊಲದಲ್ಲಿ ಮೇಕೆ ಮೇಯಿಸುತ್ತಿದ್ದಾಗ  ಸಿಡಿಲು ಬಡಿದು ಅಮೋಘಿ ಶಿವಣಗಿ ಎಂಬ 38 ವರ್ಷದ ಕುರಿಗಾಯಿ ಸಾವಿಗೀಡಾಗಿದ್ದಾನೆ. ಅಲ್ಲದೇ 20 ಮೇಕೆಗಳೂ ಸಿಡಿಲಿನ ಹೊಡೆತಕ್ಕೆ ಮೃತಪಟ್ಟಿವೆ.

ಸದ್ಯ ಸ್ಥಳಕ್ಕೆ ಬಬಲೇಶ್ವರ ಪೋಲಿಸ್ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

 

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button