ರಾಷ್ಟ್ರ ಮಟ್ಟದ ಪುಟ್‌ಬಾಲ್ ಪಂದ್ಯಾವಳಿಗೆ ಲಿಂಗರಾಜ ಪಿಯು ವಿದ್ಯಾರ್ಥಿನಿಯರು ಆಯ್ಕೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬಳ್ಳಾರಿಯಲ್ಲಿ ಜರುಗಿದ ಪದವಿಪೂರ್ವ ವಿದ್ಯಾರ್ಥಿಗಳ 2022-23ನೇ ಸಾಲಿನ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ, ಬೆಳಗಾವಿಯ ಕೆ.ಎಲ್.ಇ. ಸಂಸ್ಥೆಯ ಲಿಂಗರಾಜ ಪದವಿಪೂರ್ವ ಕಾಲೇಜಿನಲ್ಲಿ ಪಿಯು ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯರು ಅದ್ಭುತ ಸಾಧನೆಗೈದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಸಮೃದ್ಧಿ ಕುಡಚಿ, ತನ್ವಿ ಗಾವಡೆ, ಧನಶ್ರೀ ಕದಂ ಮತ್ತು ಸಯಾಲಿ ದೇಸಾಯಿ ಅವರು ಫುಟ್‌ಬಾಲ್‌ನಲ್ಲಿ ರನ್ನರ್ಸ್ ಅಪ್ ಆಗಿ ಹೊರಹೊಮ್ಮಿದ್ದಾರೆ. ಆ ಮೂಲಕ ಅವರು ರಾಷ್ಟ್ರಮಟ್ಟಕ್ಕೆ ಅರ್ಹತೆ ಪಡೆದಿದ್ದಾರೆ.
ಅತ್ಯುತ್ತಮ ಗೋಲ್ ಕೀಪರ್ ಆಗಿ ಸಮೃದ್ಧಿ ಕುಡಚಿ ಆಯ್ಕೆಯಾಗಿದ್ದಾರೆ. ಅವರ ಗಮನಾರ್ಹ ಸಾಧನೆಗಾಗಿ ಕೆಎಲ್‌ಇ ಆಡಳಿತ ಮಂಡಳಿ ನಿರ್ದೇಶಕರಾದ ವೈ.ಎಸ್.ಪಾಟೀಲ, ಬಿ.ಆರ್.ಪಾಟೀಲ, ಮಾಜಿ ಎಂಎಲ್‌ಸಿ ಮಹಾಂತೇಶ ಕವಟಗಿಮಠ, ಎಂ.ಸಿ.ಕೊಳ್ಳಿ, ಡಾ.ಎಂ.ಟಿ.ಕಾಂಬಳೆ, ಪಿಯು ಪ್ರಾಚಾರ್ಯೆ ಪ್ರೊ.ಗಿರಿಜಾ ಹಿರೇಮಠ, ಪದವಿ ಪ್ರಾಚಾರ್ಯ ಡಾ.ಎಚ್.ಎಸ್.ಮೇಲಿನಮನಿ, ದೈಹಿಕ ಶಿಕ್ಷಣ ನಿರ್ದೇಶಕ ಡಾ.ಸಿ.ರಾಮರಾವ್ ಅಭಿನಂದಿಸಿದ್ದಾರೆ.
ಭೂರಣಕಿ, ಕರೀಕಟ್ಟಿ ಗ್ರಾಮಗಳ ಸುತ್ತಮುತ್ತ ಕಾಡಾನೆಗಳ ಹಿಂಡು ದಾಳಿ: ಅಪಾರ ಪ್ರಮಾಣದ ಬೆಳೆನಾಶ
https://pragati.taskdun.com/herds-of-elephants-attack-around-bhuranaki-karikatti-villages-massive-crop-destruction/
https://pragati.taskdun.com/aruna-shahapurabelagavi-sessionschool-colleges-problems/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ