ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –58ನೇ ಲಿಂಗಾಯತ ವಧು-ವರ-ಪಾಲಕರ ಸಮಾವೇಶ ಭಾನುವಾರ ನಡೆಯಿತು. ರಾಜ್ಯಸಭಾ ಸದಸ್ಯರೂ, ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷರೂ ಆಗಿರುವ ಡಾ.ಪ್ರಭಾಕರ ಕೋರೆ ಸಮಾವೇಶವನ್ನು ಉದ್ಘಾಟಿಸಿದರು.
ಒಳ ಪಂಗಡಗಳನ್ನು ಮರೆತು ಸಂಬಂಧಗಳನ್ನು ಬೆಳೆಸಿದರೆ ಶರಣ ಧರ್ಮದ ಆಶಯ ಈಡೇರುತ್ತದೆ ಎಂದು ಕೋರೆ ಹೇಳಿದರು. ಅಂಗದ ಮೇಲೆ ಲಿಂಗವ ಧರಿಸಿದವರನ್ನೆಲ್ಲ ಕೂಡಲಸಂಗಮನೆಂಬೆ ಎನ್ನುವ ಮಾತನ್ನು ಕ್ರಿಯೆಗಿಳಿಸಿದರೆ ನಮ್ಮ ಸಮಾದಲ್ಲಿ ಐಕ್ಯತೆ ಮೂಡುತ್ತದೆ ಎಂದೂ ಅವರು ಹೇಳಿದರು.
ಕಾರಂಜಿಮಠದ ಗುರುಸಿದ್ಧ ಸ್ವಾಮಿಗಳು ಮಾತನಾಡಿ, ವಧು-ವರ ಪಾಲಕರು ಅಧಿಕಾರ, ಅಂತಸ್ತು ನೋಡದೆ ಸಂಸ್ಕಾರ, ಸಂಸ್ಕೃತಿ, ಆರೋಗ್ಯ, ನೀಡಿ ಸಲಕ್ಷಣಗಳಿಗೆ ಆದ್ಯತೆ ಸಂಬಂಧ ಬೆಳೆಸಲು ಮುಂದಾಗಬೇಕು ಎಂದರು.
ಸಿದ್ದನಗೌಡ ಪಾಟೀಲ, ಬಿ.ವಿ.ಕಟ್ಟಿ, ಪ್ರಕಾಶ ಬಾಳೆಕುಂದ್ರಿ, ಎಂ.ಬಿ.ಜಿರಲಿ, ಗುರುದೇವಿ ಹುಲೆಪ್ಪನವರಮಠ, ಭಾರತಿ ಮಠದ, ವಿಜಯಾ ಪುಟ್ಟಿ, ವಿದ್ಯಾ ಸವದಿ, ಜಯಾ ಜಾಲಿಹಾಳ, ಆಶಾ ಪಾಟೀಲ, ಸುಧಾ ಪಾಟೀಲ, ಗುರುರಾಜ ಹುಣಶಿಮರದ ಮೊದಲಾದವರು ವೇದಿಕೆಯಲ್ಲಿದ್ದರು.
ಎಫ್.ವಿ.ಮಾನ್ವಿ ಸ್ವಾಗತಿಸಿದರು. ರತ್ನಪ್ರಭಾ ಬೆಲ್ಲದ ಪ್ರಸ್ತಾವಿಕ ಮಾತನಾಡಿದರು. ಆಶಾ ಯಮಕನಮರಡಿ ಕಾರ್ಯಕ್ರಮ ನಿರೂಪಿಸಿದರು. ಜಯಶೀಲಾ ಬ್ಯಾಕೋಡ ವಂದಿಸಿದರು.
ಕೆಎಲ್ಇ ಸಂಸ್ಥೆಯ ವೀರಶೈವ ಲಿಂಗಾಯತ ವಧು-ವರ ಅನ್ವೇಷಣಾ ಕೇಂದ್ರ ಮತ್ತು ಅಖಿಲ ಭಾರತ ವೀರಶೈವ ಮಹಾಸಭಾ ಆಶ್ರಯದಲ್ಲಿ ಸಮಾವೇಶ ನಡೆಯಿತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ