Latest

2020 ಕ್ಕೆ ರೂ. 2000 ದ ನೋಟು ರದ್ದಾಗುತ್ತಾ? ವೈರಲ್ ಸಂದೇಶ

ಪ್ರಗತಿವಾಹಿನಿ ಸುದ್ದಿ, ನವದೆಹಲಿ

ಹೊಸ ವರ್ಷವನ್ನು ಪ್ರವೇಶಿಸಲು ಕೆಲವೇ ದಿನಗಳು ಉಳಿದಿವೆ. ಈ ಸಮಯದಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಸಂದೇಶಗಳು ಹರಿದಾಡುತ್ತಿವೆ. ಭಾರತೀಯ ರಿಸರ್ವ್ ಬ್ಯಾಂಕ್ ರೂ.2000 ದ ನೋಟನ್ನು ಜನವರಿ 2020 ರಿಂದ ರದ್ದು ಮಾಡುತ್ತಿದೆ ಎಂಬ ಸಂದೇಶಗಳು ಜನರ ತಲೆ ಕೆಡಿಸಿದೆ.

Home add -Advt

ರೂ.2000 ದ ಮುಖ ಬೆಲೆಯ ಹಳೆಯ ನೋಟುಗಳು 2019 ರ ಡಿಸೆಂಬರ್ 31 ರವರೆಗೆ ಮಾನ್ಯವಾಗಿರುತ್ತವೆ ಮತ್ತು ತ್ವರಿತವಾಗಿ ಪರಿವರ್ತಿಸಬೇಕು. ಒಬ್ಬ ವ್ಯಕ್ತಿಯು 50,000 ರೂ.ವರೆಗೆ ಮಾತ್ರ ಹಣವನ್ನು ವರ್ಗಾಯಿಸಬಹುದು ಎಂಬುದು ಆ ವೈರಲ್ ಸಂದೇಶದ ಸಾರಾಂಶ. ಆದರೆ ಈ ಸಂದೇಶವು ಸುಳ್ಳಾಗಿದ್ದು, ಯಾವುದೇ ಸತ್ಯವಿಲ್ಲ ಎಂದು ಅಧಿಕಾರಿಗಳು ಸಂದೇಶವನ್ನು ನಕಲಿ ಎಂದು ತಳ್ಳಿಹಾಕಿದ್ದಾರೆ.

ಸಚಿವ ಅನುರಾಗ್ ಠಾಕೂರ್ ಅವರು ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿ,  ‘ಇವು ಕೇವಲ ವದಂತಿಗಳು. ಆರ್‌ಬಿಐ ಅಂತಹ ಯಾವುದೇ ಅಧಿಸೂಚನೆಯನ್ನು ನೀಡಿಲ್ಲ. ನೀವು ಹೆಚ್ಚಿನ ವಿವರಗಳನ್ನು ಬಯಸಿದರೆ, ಆರ್ ಬಿ ಐ ಅಧಿಕೃತ ವೆಬ್ ಸೈಟ್ ಅನ್ನು ನೋಡಿ, “ಎಂದು ತಿಳಿಸಿದ್ದಾರೆ.

2016 ರ ವರ್ಷದ ನವೆಂಬರ್‌ ಕೊನೆಯಲ್ಲಿ,  ಕೇಂದ್ರ ಸರ್ಕಾರ ಹಳೆಯ ನೋಟುಗಳನ್ನು ರದ್ದುಗೊಳಿಸಿ ಸಂಚಲನ ಮೂಡಿಸಿತ್ತು.. ಅಂದಿನಿಂದ, ಅದೇ ಭಯವನ್ನು ಪ್ರಚೋದಿಸಲು .. ಸೋಶಿಯಲ್ ಮೀಡಿಯಾದಲ್ಲಿ ನಕಲಿ ಸಂದೇಶಗಳು ಹರಿದಾಡುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇತ್ತೀಚೆಗೆ ಪ್ರತಿಷ್ಠಿತ ವಿಆರ್ ಎಲ್ ಸಂಸ್ಥೆ ತನ್ನ ಆಂತರಿಕ ವ್ಯವಹಾರದ ಭಾಗವಾಗಿ ಸಿಬ್ಬಂದಿಗಳು 2000 ರೂ. ನೋಟುಗಳನ್ನು ಸ್ವೀಕರಿಸಬಾರದು. ಮತ್ತು 2000 ರೂ. ನೋಟುಗಳು ಸಂಗ್ರಹದಲ್ಲಿದ್ದರೆ ಕೂಡಲೇ ಬ್ಯಾಂಕಿಗೆ ಜಮಾ ಮಾಡಬೇಕು ಎಂದು ಸುತ್ತೋಲೆ ಹೊರಡಿಸಿತ್ತು. ಅದು ಕೂಡ ವೈರಲ್ ಆಗಿದೆ.

ಈ ಎಲ್ಲ ಬೆಳವಣಿಗೆಗಳು ಜನರ ನಿದ್ದೆಗೆಡಿಸಿದ್ದು, 2000 ರೂ ನೋಟು ವ್ಯವಹಾರ ಕಷ್ಟವಾಗಿದೆ.

Related Articles

Back to top button