CrimeKannada NewsLatestNational

*ಮಹಿಳೆಯನ್ನು ಹೋಟೆಲ್ ನಲ್ಲಿ ಕೂಡಿಹಾಕಿ ಅತ್ಯಾಚಾರ*: *ಎನ್ ಕೌಂಟರ್ ನಡೆಸಿ ಕಾಮುಕನನ್ನು ಬಂಧಿಸಿದ ಪೊಲೀಸರು*

ಪ್ರಗತಿವಾಹಿನಿ ಸುದ್ದಿ: ಹೋಟೆಲ್ ಒಂದರಲ್ಲಿ ಮಹಿಳೆಯನ್ನು ಕೂಡಿ ಹಾಕಿ ಅತ್ಯಾಚಾರ ಎಸಗಿರುವ ಘಟನೆ ಬೆಳಕಿಗೆ ಬಂದಿದೆ.

ಈ ಪ್ರಕರಣ ಸಂಬಂಧ ಪೊಲೀಸರು ಆರೋಪಿಯನ್ನು ಎನ್‌ಕೌಂಟರ್‌ ನಡೆಸಿ ಬಂಧಿಸಿದ್ದಾರೆ. ಸಲ್ಮಾನ್ ಬಂಧಿತ ಆರೋಪಿ. ಈತ ಹೋಟೆಲ್‌ ಒಂದರಲ್ಲಿ ಮಹಿಳೆಯನ್ನು ಅಕ್ರಮವಾಗಿ ಬಂಧಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದ.

ಆಕೆ ತಪ್ಪಿಸಿಕೊಂಡು ಪರಾರಿಯಾಗಲು ಯತ್ನಿಸಿದ್ದಾಗ ಆಕೆಯನ್ನು ಬೆನ್ನಟ್ಟಿ, ಹೋಟೆಲ್‌ ಎದುರಿನಲ್ಲೇ ಹಿಡಿದು ಹಲ್ಲೆ ನಡೆಸಿದ್ದ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು.

ಉತ್ತರ ಪ್ರದೇಶದ ಮಿರತ್‌ನಲ್ಲಿ ಈ ಘಟನೆ ನಡೆದಿದೆ. ಈ ಬಗ್ಗೆ ಮಾಹಿತಿ ನೀಡಿರುವ ಮೀರತ್ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಬಿಬಿಜಿಟಿಎಸ್ ಮೂರ್ತಿ, ದಲಿತ ಮಹಿಳೆಯನ್ನು ಸಲ್ಮಾನ್ ಎಂಬ ವ್ಯಕ್ತಿ ಬಂಧಿಸಿ ಹಲ್ಲೆ ನಡೆಸಿದ್ದ. ಈ ಬಗ್ಗೆ ಸದರ್ ಬಜಾರ್ ಪೊಲೀಸ್ ಠಾಣೆಗೆ ಲಿಖಿತ ದೂರು ಬಂದಿತ್ತು. ಆತ ಲೋಹಿಯಾ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ನರ್ಹೇಡಾ ಗ್ರಾಮದ ನಿರ್ಮಾಣ ಹಂತದ ಅಂಡರ್‌ಪಾಸ್ ಬಳಿ ಅಡಗಿಕೊಂಡಿದ್ದಾನೆ ಎಂಬ ನಿರ್ದಿಷ್ಟ ಮಾಹಿತಿ ಮೇರೆಗೆ ಪೊಲೀಸರು ಬಂಧನಕ್ಕೆ ತೆರಳಿದ್ದರು.

ಈ ವೇಳೆ ಸಲ್ಮಾನ್ ಪೊಲೀಸರ ಮೇಲೆ ಗುಂಡು ಹಾರಿಸಿದ್ದಾನೆ. ಆತ್ಮರಕ್ಷಣೆಗಾಗಿ ಪೊಲೀಸರು ಆರೋಪಿಯ ಮೇಲೆ ಪ್ರತಿ ದಾಳಿ ನಡೆಸಿದ್ದಾರೆ. ಈ ವೇಳೆ ತಪ್ಪಿಸಿಕೊಳ್ಳುವ ಯತ್ನದಲ್ಲಿ ಸೇತುವೆ ಮೇಲೆ ಹತ್ತಿ ಜಾರಿ ಬಿದ್ದಿದ್ದಾನೆ. ಇದರಿಂದ ಆತನ ಕಾಲು ಮತ್ತು ಕೈಗೆ ಗಾಯಗಳಾಗಿವೆ. ಆತನನ್ನು ಚಿಕಿತ್ಸೆಗಾಗಿ ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಆರೋಪಿ ಹೋಟೆಲ್‌ನಲ್ಲಿ ಯಾವುದೇ ಗುರುತಿನ ಚೀಟಿಯನ್ನು ನೀಡದೆ ಕೊಠಡಿ ಕಾಯ್ದಿರಿಸಿದ್ದ. ಆ ರೂಮ್‌ನಲ್ಲಿ ಮಹಿಳೆಯನ್ನು ಕೂಡಿಹಾಕಿದ್ದ. ಆಕೆ ನವೆಂಬರ್ 23 ರಂದು ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ, ಬೆನ್ನಟ್ಟಿ, ಕೂದಲು ಹಿಡಿದು ಎಳೆದಾಡಿ ಹಲ್ಲೆ ನಡೆಸಿ, ಬಲವಂತವಾಗಿ ಹಿಂದಕ್ಕೆ ಕರೆದೊಯ್ದಿದ್ದ. ಈ ವಿಡಿಯೋ ವೈರಲ್‌ ಆಗಿತ್ತು.

ಈ ವಿಡಿಯೋ ವೈರಲ್‌ ಆದ ಬೆನ್ನಲ್ಲೇ ಹೋಟೆಲ್ ಸೀಜ್‌ ಮಾಡಿ, ವ್ಯವಸ್ಥಾಪಕ ಮತ್ತು ಆರೋಪಿಯ ಕುಟುಂಬದ ಸದಸ್ಯರನ್ನು ಪೊಲೀಸರು ಬಂಧಿಸಿದ್ದರು.

Related Articles

Back to top button