
ಪ್ರಗತಿವಾಹಿನಿ ಸುದ್ದಿ: ಬಸವ ಮಂಟಪ ಕೃತಿಯಲ್ಲಿ ಬಸವಣ್ಣನವರಿಗೆ ಅಪಮಾನ ಮಾಡಿದ ವಿಚಾರ ತೀವ್ರ ವಿವಾದದಕ್ಕೆ ಕಾರಣವಾಗಿದ್ದು, ಲೇಖಕ ರವಿ ಹಂಜ್ ವಿಡಿಯೋ ಹೇಳಿಕೆ ಬಿಡಿಗಡೆ ಮಾಡಿ ಹಲವು ವಿಚಾರಗಳನ್ನು ಸಾರ್ವಜನಿಕವಾಗಿ ಹಂಚಿಕೊಂಡಿದ್ದಾರೆ.
ವಿಡಿಯೋವೊಂದನ್ನು ಬಿಡುಗಡೆ ಮಾಡಿರುವ ಅವರು, ನನ್ನ ಇತ್ತಿಚೀನ ಬಸವ ಮಂಟಪ ಕೃತಿಯಲ್ಲಿ ಏನಿದೆ ಅಂತಾ ಆರೋಪ ಮಾಡ್ತಿದ್ದಾರೋ ಗೊತ್ತಿಲ್ಲ. ಇದು ಬಣವಣ್ಣರಿಗೆ ಮಸಿಬಳಿಯುವ ಕೆಲಸ ಅಂತಿದ್ದಾರೆ. ಆದರೆ ಅದು ಸಲ್ಲದು. ಇವರು ಯಾರೂ ಪುಸ್ತಕ ಓದಿಲ್ಲ. ಬೇಕಿದ್ರೆ ಈ ಬಗ್ಗೆ ಚರ್ಚೆ ಇಟ್ಟುಕೊಳ್ಳೋಣ ಎಂದವರು ಹೇಳಿದ್ದಾರೆ.
ಕೆಲವೇ ಕೆಲವು ಜನರ ತಂತ್ರಕ್ಕೆ ಮರುಳಾಗಿ ಸರ್ಕಾರ ಹೇಸಿಗೆ ನಿರ್ಧಾರ ತೆಗೆದುಕೊಂಡಿರುವ ಕಾರಣ ತನಗೆ ನಗು ಬರುತ್ತಿದೆ. ಅದೇ ರೀತಿ ಇವರ ಕುತಂತ್ರಕ್ಕೆ ಸಾಕಷ್ಟು ಜನ ಮುಗ್ದರು ತನ್ನ ವಿರುದ್ಧ ಪ್ರತಿಭಟಿಸುತ್ತಿರುವುದಕ್ಕೆ ಮರುಕ ಉಂಟಾಗುತ್ತಿದೆ. ಇನ್ನು ನನ್ನ ತಲೆಗೆ ಫತ್ವಾ ಹೊರಡಿಸದವರ ಬಗ್ಗೆಯಾಗಲಿ, ಕೈ-ಕಾಲು ಮುರಿಸಬೇಕು ಎಂದವರ ಬಗ್ಗೆಯಾಗಲೀ ತನಗೆ ದ್ವೇಷವಿಲ್ಲ. ಅವರ ಬಗ್ಗೆ ವಿಷಾದವಿದೆ. ಯಾಕೆಂದರೆ ಸತ್ಯವನ್ನು ತಿಳಿದುಕೊಳ್ಳುವ ಪ್ರಯತ್ನವನ್ನೇ ಮಾಡದವರ ಬಗ್ಗೆ ಮರುಕ, ಕರುಣೆ ಉಂಟಾಗುತ್ತಿದೆ. ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ ಎಂಬ ಬಸವಣ್ಣರ ವಚನವಿದೆ. ಆದರೆ ಇದಕ್ಕೆ ವೈರುಧ್ಯವಾಗಿ ಬಿಜ್ಜಳನ ಖಜಾನೆಯನ್ನು ಬಳಸಿ ಜಂಗಮರಿಗೆ ಬಸವಣ್ಣ ದಾಸೋಹ ಮಾಡಿದ್ದಾರೆ ಮತ್ತು ಬಿಜ್ಜಳನನ್ನು ಕೊಲ್ಲಿಸಿದ್ದಾರೆ ಎಂದು ಹೇಳ್ತಾರೆ ಎಂಬ ಬಗ್ಗೆ ಉಲ್ಲೇಖಿಸಿದ್ದೆ. ಆದರೆ ಅದನ್ನು ಕುತಂತ್ರಿಗಳು ತಮಗೆ ಬೇಕಾದ ಹಾಗೆ ತುಂಡರಿಸಿ ವಿಡಿಯೋ ಹರಿಯಬಿಟ್ಟಿದ್ದಾರೆ ಎಂದು ರವಿ ಹಂಜ್ ಆರೋಪಿಸಿದ್ದಾರೆ.
ತನ್ನ ಮೇಲೆ ಕೇಸ್ ದಾಖಲಿಸಿ ಮಾನಸಿಕವಾಗಿ ಕುಗ್ಗಿಸುವ ಯತ್ನವನ್ನೂ ನಡೆಸಲಾಗಿದೆ. ಆದರೆ ತಾನೊಬ್ಬ ಸತ್ಯವಂತ ಮತ್ತು ಪ್ರಾಮಾಣಿಕ. ಹೀಗಾಗಿ ಅವರ ಯಾವುದೇ ಆಮಿಷಗಳು ತನಗೆ ತಟ್ಟಲ್ಲ. ಈ ಬಗ್ಗೆ ನ್ಯಾಯಾಲಯದಲ್ಲಿ ಕೇಸ್ ಹಾಕುತ್ತೇನೆ. ತನ್ನ ಕೃತಿಯಲ್ಲಿ ಯಾವುದೇ ಅವಹೇಳನವಿಲ್ಲ. ಬಸವರಾಜದೇವ ರಗಳೆ, ಬಸವಪುರಾಣ ಮತ್ತು ಗೆಜೆಟಿಯರ್ಗಳನ್ನು ಉಲ್ಲೇಖಿಸಿ ಪುಸ್ತಕದಲ್ಲಿ ಹೇಳಿದ್ದೇನೆಯೇ ಹೊರತು ತನ್ನ ಸ್ವಂತದ್ದು ಅದರಲ್ಲಿ ಏನೂ ಇಲ್ಲ. ಹೀಗಾಗಿ ಸಮಾಜದ ಸ್ವಾಸ್ಥ್ಯ ಕೆಟ್ಟಿದ್ದು ಸರ್ಕಾರಿ ಪ್ರಾಯೋಜಿತವೇ ಹೊರತು ತಾನಲ್ಲ. ಅರವಿಂದ ಜತ್ತಿ ಅಂತವರು ಹಬ್ಬಿಸಿರುವ ಸುಳ್ಳು ಸುದ್ದಿಗಳು ಇವು ಎಂದು ಅವರು ತಿಳಿಸಿದ್ದಾರೆ. ಜೊತೆಗೆ ಪುಸ್ತಕದಲ್ಲಿ ಏನಿದೆ ಎಂಬುದನ್ನು ಪರಿವಿಡಿಯಲ್ಲಿಯೇ ತಿಳಿಸಲಾಗಿದೆ ಎಂದು ರವಿ ಹಂಜ್ ವಿವರಿಸಿದ್ದಾರೆ.




