Belagavi NewsBelgaum NewsBusinessKannada NewsKarnataka News

*ಲಿಂಗಾಯತ ಬಿಸಿನೆಸ್ ಫೋರಮ್‌ 50ನೇ ಸಭೆಯ ಮೈಲಿಗಲ್ಲು ಆಚರಣೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಲಿಂಗಾಯತ ಬಿಸಿನೆಸ್ ಫೋರಮ್‌ (ಎಲ್‌ಬಿಎಫ್‌) ಉದ್ಯಮಿಗಳು, ವೃತ್ತಿಪರರು ಮತ್ತು ವ್ಯಾಪಾರ ನಾಯಕರ ಸಕ್ರಿಯ ವೇದಿಕೆ ತನ್ನ 50ನೇ ಮಾಸಿಕ ಸಭೆ ನಡೆಸಿತು. 

ಸಾಧನೆ, ಸಮುದಾಯ ಆಧಾರಿತ ವ್ಯವಹಾರ ಅಭಿವೃದ್ಧಿ, ಪರಸ್ಪರ ಸಹಕಾರ ಮತ್ತು ಪ್ರಗತಿಗೆ ಎಲ್‌ಬಿಎಫ್‌ ನೀಡುತ್ತಿರುವ ನಿರಂತರ ಕೊಡುಗೆಯ ಪ್ರಮುಖ ಮೈಲಿಗಲ್ಲಾಗಿದೆ.

ಈ ವಿಶೇಷ ಸಭೆಯಲ್ಲಿ ವಿವಿಧ ಕ್ಷೇತ್ರಗಳಿಂದ ಅತಿಥಿಗಳು ಮತ್ತು ಸದಸ್ಯರು ಭಾಗವಹಿಸಿದ್ದರು. 

ಬಸವೇಶ್ವರ ಬ್ಯಾಂಕಿನ ಆಡಳಿತ ಮಂಡಳಿಯವರು, ವಾಣಿಜ್ಯ ಮಂಡಳಿಯ ಅಧ್ಯಕ್ಷರು ಮತ್ತು ಸದಸ್ಯರು, ಇಂಜಿನಿಯರ್ಸ್‌ ಅಸೋಸಿಯೇಷನ್‌, ಸಿಎ ಅಸೋಸಿಯೇಷನ್‌ ಹಾಗೂ ಖ್ಯಾತ ಉದ್ಯಮಿಗಳು ಉಪಸ್ಥಿತರಿದ್ದರು. ಈ ಸಭೆ ವ್ಯಾಪಾರ ಸಹಭಾಗಿತ್ವ, ಜ್ಞಾನ ಹಂಚಿಕೆ ಮತ್ತು ಅರ್ಥಪೂರ್ಣ ಚರ್ಚೆಗಳಿಗೆ ವೇದಿಕೆಯಾಯಿತು.

Home add -Advt

ಬೋರ್ಡ ಆಫ್ ಟ್ರಸ್ಟೀ ಅಧ್ಯಕ್ಷರಾದ ಕಿರಣ ಅಗಡಿ ಅವರು ಫೋರಮ್‌ನ ಸಾಧನೆಗಳನ್ನು ವಿವರಿಸಿ, ಸದಸ್ಯರ ಸಕ್ರಿಯ ಭಾಗವಹಿಸುವಿಕೆ ಮತ್ತು ನಿರಂತರ ಬೆಂಬಲಕ್ಕೆ ಕೃತಜ್ಞತೆ ವ್ಯಕ್ತಪಡಿಸಿದರು.

ಲಿಂಗರಾಜ ಜಗಜಂಪಿ, ಕಾರ್ಯಕಾರಿಣಿ ಅಧ್ಯಕ್ಷರಾಗಿ ಸಭೆಯನ್ನು ಸ್ವಾಗತಿಸಿ, ಅತಿಥಿಗಳು ಹಾಗೂ ಸದಸ್ಯರಿಗೆ ಹಾರ್ದಿಕ ಸ್ವಾಗತ ಕೋರಿದರು. ಅವರು ವ್ಯಾಪಾರದಲ್ಲಿ ಏಕತೆ, ನೈತಿಕತೆ ಮತ್ತು ಪರಸ್ಪರ ಬೆಳವಣಿಗೆಯ ಮಹತ್ವವನ್ನು ಒತ್ತಿಹೇಳಿದರು.

ಅತಿಥಿ ವೆಂಕಟೇಶ್ ಪಾಟೀಲ (ಎಂ.ಡಿ., ಬೆಳಗಾವಿ ಆಕ್ಸಿಜನ್) ಅವರು ತಮ್ಮ ಭಾಷಣದಲ್ಲಿ ಎಲ್‌ಬಿಎಫ್‌ ನೀಡುತ್ತಿರುವ ನವೀನತೆ ಮತ್ತು ಸಹಕಾರದ ಪ್ರಯತ್ನಗಳನ್ನು ಶ್ಲಾಘಿಸಿದರು. ಸದಸ್ಯರ ಮನೋಜ್ಞ ಸಂವಾದಗಳು, ಪ್ರಸ್ತುತಿಗಳು ಮತ್ತು ಪ್ರಮುಖ ಕೊಡುಗೆ ನೀಡಿದವರನ್ನು ಗೌರವಿಸಲೂ ಈ ಸಭೆ ವೇದಿಕೆಯಾಯಿತು.

ಸಚಿನ್ ಬೈಲವಾಡ ಮುಂದಿನ ಕಾರ್ಯಕ್ರಮಗಳ ಕುರಿತು ಸದಸ್ಯರಿಗೆ ಮಾಹಿತಿ ನೀಡಿ, ಎಲ್ಲರ ಸಹಕಾರಕ್ಕೆ ಧನ್ಯವಾದ ಹೇಳಿದರು.

ಸಭೆಯ ಕೊನೆಯಲ್ಲಿ ಮಹಾಂತೇಶ ಪುರಾಣಿಕ್, ಸದಸ್ಯತ್ವ ಸಮಿತಿಯ ಅಧ್ಯಕ್ಷರು, ಎಲ್ಲಾ ಸದಸ್ಯರು, ಆಯೋಜನಾ ತಂಡ ಮತ್ತು ಪ್ರಾಯೋಜಕರಿಗೆ ಕೃತಜ್ಞತೆ ಸಲ್ಲಿಸಿ ಸಭೆಯನ್ನು ಮುಗಿಸಿದರು.

Lingayat Business Forum Celebrates its 50th Meeting Milestone

Belagavi:
The Lingayat Business Forum (LBF), a vibrant network of entrepreneurs, professionals, and business leaders from the Lingayat community, proudly celebrated its 50th monthly meeting, marking a significant milestone in its journey of fostering business growth, collaboration, and community development.

The milestone meeting witnessed enthusiastic participation from members, distinguished guests, from the Banking sector, the Board of Basaveshwar Bank, The President and the members of the Chamber of commerce, The Engineers Association, members from the C A Association and well-known business personalities. The event served as a platform for meaningful discussions, business networking, and knowledge sharing—reflecting the Forum’s consistent efforts to empower its members and strengthen community-based entrepreneurship.

In his address, Shri Kiran Agadi, President of LBF, highlighted the Forum’s achievements over the years and expressed gratitude to all members for their active participation and continuous support.

The Chairman Shri Lingraj Jagajampi welcomed all the dignitaries, the member and the guests in his welco.e note. He emphasized the importance of unity, ethics, and mutual growth in business.

Guest of Honour Shri Venkatesh Patil M D Belgaum Oxygen , who graced the occasion as the Guest of Honour, applauded the Forum’s initiatives in promoting collaboration and innovation among entrepreneurs. The meeting also featured inspiring member interactions, presentations, and recognition of contributors who played key roles in the Forum’s success.

Shri Sachin Bailwad Secretary of LBF, appreciat in his secretarial announcement did some important of the Coming activities of the Forum

The event concluded with a note of thanks from Shri Mahantesh Puranik Chairman of Membership committee appreciating all members, the organizing team, and sponsors for making the 50th meeting a memorable and successful gathering.

Related Articles

Back to top button