Kannada NewsKarnataka News

ಲಯನ್ಸ್ ಕ್ಲಬ್ ನಿಂದ ಅ.20ರಂದು ವಿಶಿಷ್ಟ ಕಾರ್ಯಕ್ರಮ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಲಯನ್ಸ್ ಕ್ಲಬ್ ಆಫ್ ಬೆಳಗಾವಿ ಅ. 20ರಂದು ಐಎಂಇಆರ್ ನಲ್ಲಿ ಬೆಳಿಗ್ಗೆ 11 ರಿಂದ ರಾತ್ರಿ 9ರ ವರೆಗೆ ವಿಶಿಷ್ಟವಾದ ಕಾರ್ಯಕ್ರಮವನ್ನು ಏರ್ಪಡಿಸಿದೆ. ಫೆಸ್ಟ್ – 2019 ರಲ್ಲಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಸುಪರ್ ಜೋಡಿ, ಸುಪರ್ ಯುಥ್ ಹಾಗೂ ಸುಪರ್ ಮಹಿಳೆ ಸ್ಪರ್ಧೆಗಳಿವೆ.

ಇದರಿಂದ ಬರುವ ಆದಾಯವನ್ನು ಸಮಾಜ ಸೇವೆಗೋಸ್ಕರವೇ ಬಳಸುವುದಾಗಿ ಲಯನ್ಸ್ ಕ್ಲಬ್ ಆಫ್ ಬೆಳಗಾವಿ ತಿಳಿಸಿದೆ. ಮೊದಲನೆಯ ಬಹುಮಾನ 4000ರೂ ಎರಡನೇಯ ಬಹುಮಾನ 3000 ರೂ. ಹಾಗೂ ಮೂರನೇಯ ಬಹುಮಾನ 2000 ರೂ. ಇದೆ. ಮತ್ತು ಇದಲ್ಲದೇ ವಿವಿಧ ಸ್ಟಾಲ್ಸ್‌ಗಳನ್ನು ಕೂಡ ಹಾಕಲಾಗುತ್ತಿದೆ ಎಂದು ಲಯನ್ಸ್ ಕ್ಲಬ್ ಅಧ್ಯಕ್ಷೆ ಭಾರತಿ ವಡಾವಿ ತಿಳಿಸಿದ್ದಾರೆ.

Related Articles

Back to top button