ಪ್ರಗತಿವಾಹಿನಿ ಸುದ್ದಿ: ಆಂಧ್ರಪ್ರದೇಶದ ಮುಖ್ಯಮಂತ್ರಿ ನಾರಾ ಚಂದ್ರಬಾಬು ನಾಯ್ಡು ನೇತೃತ್ವದ ಸರ್ಕಾರ ಹೊಸ ಮದ್ಯ ನೀತಿಯನ್ನು ಪ್ರಕಟಿಸಿದೆ.
ಹರಿಯಾಣ ಮತ್ತು ಇತರೆ ರಾಜ್ಯಗಳ ಮಾದರಿಯಲ್ಲಿ ಖಾಸಗಿ ಚಿಲ್ಲರೆ ವ್ಯಾಪಾರಿಗಳಿಗೆ ಮದ್ಯ ಮಾರಾಟ ಅವಕಾಶ ಮಾಡಿಕೊಟ್ಟಿದ್ದು, ಇದರಿಂದ ರಾಜ್ಯ ಸರ್ಕಾರವು 5,500 ಕೋಟಿ ಆದಾಯ ಗಳಿಸುವ ನಿರೀಕ್ಷೆ ಹೊಂದಿದೆ ಎಂದು ವರದಿಯಾಗಿದೆ.
ಆಂಧ್ರದಲ್ಲಿ ನಕಲಿ ಹಾಗೂ ಕಳಪೆ ಗುಣಮಟ್ಟದ ಲಿಕ್ಕರ್ ಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಎನ್ ಡಿಎ ಸರ್ಕಾರವು ರಾಜ್ಯದಾದ್ಯಂತ 3,736 ಹೊಸ ಮದ್ಯದ ಮಾರಾಟ ಮಳಿಗೆಗಳನ್ನು ತೆರೆಯಲು ನಿರ್ಧರಿಸಿದೆ.
ನಾಯ್ಡು ಸರ್ಕಾರ ರಾಜ್ಯದಲ್ಲಿ 99 ರೂ ಗೆ ಬೆಲೆ ನಿಗದಿಪಡಿಸಿದ್ದು, ಇದರ ನೆರವಿನಿಂದ ಅಕ್ರಮ ಮದ್ಯಕ್ಕೆ ಕಡಿವಾಣ ಹಾಕುವುದಲ್ಲದೆ ಸ್ಥಳೀಯ ಕಂಪನಿಗಳಿಗೂ ಅಗ್ಗದ ಬ್ರಾಂಡೆಡ್ ಮದ್ಯ ತಯಾರಿಸುವ ಅವಕಾಶ ಸಿಗಲಿದೆ ಎಂದು ರಾಜ್ಯ ಸರಕಾರ ಹೇಳಿಕೊಂಡಿದೆ.
ಇತರ ರಾಜ್ಯಗಳಲ್ಲಿ ಇರುವ ಉತ್ತಮ ಅಬಕಾರಿ ನೀತಿಗಳನ್ನು ಕೂಲಂಕಷವಾಗಿ ಪರಿಶೀಲನೆ ನಡೆಸಿದ ಬಳಿಕ ಚಂದ್ರಬಾಬು ನಾಯ್ಡು ಸರ್ಕಾರ ಹೊಸ ಮದ್ಯ ನೀತಿಯನ್ನು ಜಾರಿಗೆ ತರಲಾಗಿದೆ.
ರಾಜ್ಯ ಸರ್ಕಾರದ ಅಧಿಸೂಚನೆಯಂತೆ ಹೊಸ ನೀತಿಯು ಇದೇ ಅಕ್ಟೋಬರ್ 12 ರಿಂದ ಜಾರಿಯಾಗುವಂತೆ ಸಿದ್ಧತೆ ಮಾಡಿಕೊಂಡಿದ್ದು, ಇನ್ನೂ ಮುಂದೆ ಮದ್ಯ ಪ್ರಿಯರಿಗೆ ಹಬ್ಬವೋ ಹಬ್ಬ ಎಂಬಂತಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ