Cancer Hospital 2
Beereshwara 33
LaxmiTai 5

*ಐದು ದಿನ ಮದ್ಯ ಮಾರಾಟ ನಿಷೇಧ*

Anvekar 3
GIT add 2024-1

ಪ್ರಗತಿವಾಹಿನಿ ಸುದ್ದಿ: ಲೋಕಸಭಾ ಚುನಾವಣೆ ಹಾಗೂ ವಿಧಾನಪರಿಷತ್‌ ಚುನಾವಣೆಗಳ ಹಿನ್ನೆಲೆಯಲ್ಲಿ ಜೂನ್ 1 ರಿಂದ ಜೂನ್ 5ರ ವರೆಗೆ ಒಟ್ಟು‌ ಐದು ದಿನಗಳ ಕಾಲ ಮದ್ಯ ಮಾರಾಟಕ್ಕೆ ನಿಷೇಧ ಹೇರಲಾಗಿದೆ.

Emergency Service

ಬೆಂಗಳೂರಿನಲ್ಲಿ ಜೂನ್‌ 1 ರಿಂದ 5 ದಿನಗಳ ಕಾಲ ಮದ್ಯ ಮಾರಾಟಕ್ಕೆ ನಿಷೇಧ ಹೇರಲಾಗಿದೆ. ಜೂನ್‌ 3 ರಂದು ಪದವೀಧರ ಕ್ಷೇತ್ರ ಚುನಾವಣೆಯ ಮತದಾನ ನಡೆಯಲಿದೆ. ಈ ಹಿನ್ನೆಲೆ ಜೂನ್‌ 1ರ ಸಂಜೆ 4 ಗಂಟೆಯಿಂದಲೇ ಬಾರ್‌ಗಳು ಬಂದ್‌ ಆಗಲಿವೆ. ಇದಾದ ಬಳಿಕ ಜೂನ್‌ 4 ರಂದು ದೇಶಾದ್ಯಂತ ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬೀಳಲಿದೆ. ಈ ಹಿನ್ನೆಲೆ ಅಂದು ಕೂಡಾ ಮದ್ಯ ಮಾರಾಟ ಸಂಪೂರ್ಣ ಬಂದ್‌ ಆಗಲಿದೆ. ಜೂನ್‌ 6 ರಂದು ವಿಧಾನಪರಿಷತ್ತು ಚುನಾವಣೆಯ ಮತಎಣಿಕೆ ನಡೆಯಲಿದ್ದು, ಅಂದು ಕೂಡಾ ಬಾರ್‌ಗಳನ್ನು ಬಂದ್‌ ಮಾಡುವಂತೆ ಬೆಂಗಳೂರು ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಹೀಗೆ ಜೂನ್‌ 1 ರಿಂದ 5 ದಿನಗಳ ಕಾಲ ರಾಜ್ಯ ರಾಜಧಾನಿಯಲ್ಲಿ ಬಹುತೇಕ ಬಾರ್‌ಗಳು ಬಂದ್‌ ಇರಲಿದೆ. ಈ ಹಿನ್ನೆಲೆ ಮದ್ಯ ಪ್ರಿಯರು ಇಂದಿನಿಂದಲೇ ಬಾರ್‌ಗಳಿಗೆ ಮುಗಿಬಿದ್ದು ಮನೆಯಲ್ಲೇ ಎಣ್ಣೆ ಸ್ಟಾಕ್‌ ಇಡಲು ಪ್ರಾರಂಭಿಸಿದ್ದಾರೆ.

Bottom Add3
Bottom Ad 2