
ಮಾಜಿ ಶಾಸಕರು, ರೈತ ಸಂಘದ ಪ್ರಮುಖ ನಾಯಕರು ಕಾಂಗ್ರೆಸ್ ಪಕ್ಷ ಸೇರ್ಪಡೆಗೆ ನಿರ್ಧಾರ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮಂಗಳವಾರ ಬೆಳಗಾವಿಯಲ್ಲಿ ವಿವಿಧ ಮುಖಂಡರು ಕಾಂಗ್ರೆಸ್ ಸೇರಲಿದ್ದಾರೆ. ಈ ಕುರಿತು ಸಂಜೆ 4 ಗಂಟೆಗೆ ಕಾರ್ಯಕ್ರಮ ಆಯೋಜನೆಯಾಗಿದೆ.
ಕಿತ್ತೂರು ಕರ್ನಾಟಕ ಭಾಗದ ಬೆಳಗಾವಿ, ಧಾರವಾಡ , ಹಾವೇರಿ , ಗದಗ , ಬಾಗಲಕೋಟೆ ಹಾಗೂ ಕಾರವಾರ ಜಿಲ್ಲೆಗಳ ವ್ಯಾಪ್ತಿಯ ರೈತ ಸಂಘದ ಪ್ರಮುಖ ಮುಖಂಡರು ಹಾಗೂ ಸಂಘದ ಪದಾಧಿಕಾರಿಗಳು, ಕಾರ್ಯಕರ್ತರು ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕೃತವಾಗಿ ಸೇರ್ಪಡೆಯಾಗಲಿದ್ದಾರೆ.
ಇದೇ ಸಮಯದಲ್ಲಿ ಧಾರವಾಡ ಗ್ರಾಮೀಣ ಕ್ಷೇತ್ರದ ಮಾಜಿ ಶಾಸಕರಾದ ಶಿವಾನಂದ ಅಂಬಡಗಟ್ಟಿ ಸಹ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಯಾಗಲಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿ ಪಕ್ಷಕ್ಕೆ ಬರಮಾಡಿಕೊಳ್ಳಲಿದ್ದಾರೆ.
ಈ ಸಂದರ್ಭದಲ್ಲಿ ವಿಧಾನ ಪರಿಷತ್ತು ವಿರೋಧ ಪಕ್ಷದ ನಾಯಕ ಬಿ.ಕೆ ಹರಿಪ್ರಸಾದ ಹಾಗೂ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ , ಸಲೀಂ ಅಹ್ಮದ್ ರವರು, ಹಾಗೂ ಮಾಜಿ ಸಚಿವರಾದ ಡಿ.ಬಿ.ಇನಾಮದಾರ ಸೇರಿದಂತೆ ಪಕ್ಷದ ಪ್ರಮುಖ ನಾಯಕರು ಉಪಸ್ಥಿತರಿರಲಿದ್ದಾರೆೆ .
ಸೇರ್ಪಡೆಯಾಗುವವರ ಹೆಸರುಗಳು:
ಶಿವಾನಂದ ಹೊಳೆಹಡಗಲಿ, ಬೈಲಪ್ಪ ದಳವಾಯಿ, ಸಿದ್ದಣ್ಣ ಕಂಬಾರ, ಬಿಷ್ಟಪ್ಪ ಶಿಂಧೆ, ಮಡಿವಾಳಪ್ಪ ವರಗಣ್ಣವರ, ಕಲ್ಲಪ್ಪ ಕುಗಟಿ, ಕಲಗೌಡ ಪಾಟೀಲ, ಮಹಾಂತೇಶ ರಾಹುತ, ನಿಂಗಪ್ಪ ನಂದಿ, ನೀಲಕಂಠ ನೀರೋಳ್ಳಿ, ನಾಗಯ್ಯ ಪೂಜಾರ, ಭೀಮಣ್ಣ ಕಾಸಾಯಿ, ಸೇರಿದಂತೆ ಸಾವಿರಾರು ರೈತ ಸಂಘದ ಕಾರ್ಯಕರ್ತರು ಸೇರ್ಪಡೆಯಾಗಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
*ಬೆಳಗಾವಿಯಲ್ಲಿ ಹೂಡಿಕೆಗೆ ರಾಕ್ ಸ್ಪೇಸ್ ಕಂಪನಿ ಆಸಕ್ತಿ, ಸಚಿವರ ಜತೆ ಮಾತುಕತೆ*
https://pragati.taskdun.com/rock-space-company-interested-in-investing-in-belagavi-talks-with-minister/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ