Kannada NewsKarnataka NewsLatest

ಡಾ. ಡಿ.ಎಸ್. ಕರ್ಕಿ ಕಾವ್ಯ ಪ್ರಶಸ್ತಿ-2022 ಪುರಸ್ಕೃತರ ಪಟ್ಟಿ ಪ್ರಕಟ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:  ಇಲ್ಲಿನ ಡಾ. ಡಿ.ಎಸ್.ಕರ್ಕಿ ಪ್ರತಿಷ್ಠಾನ ಟ್ರಸ್ಟ್ ಪ್ರತಿ ವರ್ಷ ನೀಡುವ ಡಾ.ಡಿ.ಎಸ್. ಕರ್ಕಿ ಕಾವ್ಯ ಪ್ರಶಸ್ತಿ-2022 ಪುರಸ್ಕೃತ ಸಾಹಿತಿಗಳ ಪಟ್ಟಿ ಬಿಡುಗಡೆಯಾಗಿದೆ.

ಡಾ. ಗುರುದೇವಿ ಹುಲೆಪ್ಪನವರಮಠ ಅವರ ಮುದ್ದಿಸುತ್ತಾಳೆ ಕೈಗಳ, ಡಾ. ಶಶಿಕಾಂತ ಪಟ್ಟಣ ಅವರ ಗಾಂಧಿಗೊಂದು ಪತ್ರ ಹಾಗೂ ಭುವನಾ ಹಿರೇಮಠ ಅವರ ಮತ್ತೆ ಮತ್ತೆ ಮತ್ಸ್ಯಕ್ಕಿಳಿಯುತ್ತೇನೆ ಕೃತಿಗಳು ಆಯ್ಕೆಯಾಗಿವೆ.

ಪ್ರಶಸ್ತಿ ಆಯ್ಕೆ ಬಯಸಿ ಒಟ್ಟು 32 ಕೃತಿಗಳು ಬಂದಿದ್ದವು. ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಡಿ. 17 ರಂದು ಡಾ. ತೋಂಟದ ಸಿದ್ದರಾಮಯ್ಯ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಟ್ರಸ್ಟ್ ನ ಕಾರ್ಯದರ್ಶಿ ಪ್ರೊ. ಗಿರೀಶ ಕರ್ಕಿ, ಪ್ರೊ ವಿಜಯಲಕ್ಷ್ಮಿ ಪುಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

*ಶಾಲಾ ಮಕ್ಕಳಿಗೆ ಗುಡ್ ನ್ಯೂಸ್; ವಿಶೇಷ ಭೋಜನ ಕಾರ್ಯಕ್ರಮ*

Home add -Advt

https://pragati.taskdun.com/progress-in-global-commitment-to-equal-human-rights-for-women/

*ರಾಜ್ಯದ ಹಲವು ಜಿಲ್ಲೆಗಳಲ್ಲಿ ಮತ್ತೆ ಐದು ದಿನ ಭಾರಿ ಮಳೆ*

https://pragati.taskdun.com/karnataka5daysrainimd/

Related Articles

Back to top button