Kannada NewsKarnataka NewsLatest

*26ರ ವಿಧವೆ ಜೊತೆ 56 ವ್ಯಕ್ತಿಯ ಲಿವಿಂಗ್ ರಿಲೇಶನ್ ಶಿಪ್: ಪ್ರೇಯಸಿಯನ್ನು ಬೆಂಕಿ ಹಚ್ಚಿ ಕೊಂದ ಕಿರಾತಕ*

ಪ್ರಗತಿವಾಹಿನಿ ಸುದ್ದಿ: 26 ವರ್ಷದ ವಿಧವೆಯ ಜೊತೆ 56 ವರ್ಷದ ವ್ಯಕ್ತಿಯೋರ್ವ ಲಿವಿಂಗ್ ರಿಲೇಷನ್ ಶಿಪ್ ನಲ್ಲಿದ್ದು, ಮನಸ್ತಾಪಕ್ಕೆ ಪ್ರೇಯಸಿಯನ್ನು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಗೈದಿರುವ ಘಟನೆ ನಡೆದಿದೆ.

ಬೆಂಗಳೂರಿನ ಆನೇಕಲ್ ಬಳಿ ಈ ಘಟನೆ ನಡೆದಿದೆ. ಕ್ಯಾಬ್ ಚಾಲಕ ವಿಠಲ್ (56) ತನ್ನ ಲಿವಿಂಗ್ ಗೆಳತಿ 26 ವರ್ಷದ ವನಜಾಕ್ಷಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

ಕ್ಯಾಬ್ ಡ್ರೈವರ್ ಆಗಿದ್ದ ವಿಠಲಿನಿಗೆ ಈಗಾಗಲೇ ಎರಡು ಮದುವೆಯಾಗಿತ್ತು. ಮೊದಲ ಪತ್ನಿ ಸಾವನ್ನಪ್ಪಿದ್ದರೆ, ಎರಡನೇ ಪತ್ನಿ ಈತನ ಸಹವಾಸವೇ ಸಾಕೆಂದು ಬಿಟ್ಟು ಹೋಗಿದ್ದಳು. ಈನಡುವೆ ವನಜಾಕ್ಷಿ ಎಂಬ ಮಹಿಳೆಯ ಪರಿಚಯವಾಗಿದೆ.

Home add -Advt

ವನಜಾಕ್ಷಿಗೆ ಅದಾಗಲೇ ಪತಿ ಸಾವನ್ನಪ್ಪಿದ್ದರಿಂದ ಒಬ್ಬಂಟಿಯಾಗಿದ್ದಳು. ಈ ವೇಳೆ 56 ವರ್ಷದ ವಿಠಲನ ಪರಿಚಯವಾಗಿದೆ. ಪರಿಚಯ ಮದುವೆಯಾಗದೇ ಸಹಜೀವನ ನಡೆಸುವಷ್ಟರಮಟ್ಟಿಗೆ ಹೋಗಿದ್ದು, ಇಬ್ಬರೂ ಲಿವಿಂಗ್ ರಿಲೇಷನ್ ಶಿಪ್ ನಲ್ಲಿದ್ದರು. ವನಜಾಕ್ಷಿ ಹಲವು ರೀಲ್ಸ್ ವಿಡಿಯೋಗಳನ್ನು ಮಾಡಿದ್ದರು. ಬರಬರುತ್ತಾ ವಿಠಲನಿಗೆ ಅದಾಗಲೇ ಎರಡು ಮದುವೆ ಆಗಿತ್ತು. ಅಲ್ಲದೇ ಆತ ಕ್ಯಾಬ್ ಚಾಲಕ ಎಂಬ ವಿಚಾರ ವನಜಾಕ್ಷಿಗೆ ತಿಳಿದಿದೆ. ಇದರಿಂದ ಆಕೆ ಆತನಿಂದ ದೂರಾಗಲು ನಿರ್ಧರಿಸಿದ್ದಳು.

ವಿಷಯ ತಿಳಿಯುತ್ತಿದ್ದಂತೆ ಇಬ್ಬರ ನಡುವೆ ಜಗಳವಾಗಿ ವಿಠಲ ವನಜಾಕ್ಷಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಗಂಭೀರವಾಗಿ ಸುಟ್ಟ ಗಾಯಗಳಿಂದ ಬಳಲುತ್ತಿದ್ದ ವನಜಾಕ್ಷಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ. ಹುಳಿಮಾವು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ವಿಠಲನನ್ನು ಪೊಲೀಸರು ಬಂಧಿಸಿದ್ದಾರೆ.


Related Articles

Back to top button