ಮತ್ತೆ ಎರಡು ವಾರಗಳ ಕಾಲ ಲಾಕ್ ಡೌನ್ ವಿಸ್ತರಣೆ

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಎರಡನೇ ಹಂತದ ಲಾಕ್ ಡೌನ್ ಅವಧಿ ಮುಗಿಯುತ್ತಾ ಬಂದರೂ ದೇಶದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬಾರದ ಹಿನ್ನಲೆಯಲ್ಲಿ ಮತ್ತೆ ಎರಡು ವಾರಗಳ ಕಾಲ ಲಾಕ್ ಡೌನ್ ವಿಸ್ತರಣೆ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

ಮೇ 3ರಿಂದ ಮತ್ತೆ ಎರಡು ವಾರ ಕಾಲ ಅಂದರೆ ಮೇ 17ರವರೆಗೂ ಲಾಕ್ ಡೌನ್ ಮುಂದುವರಿಯಲಿದೆ. ಈ ಮೂರನೇ ಹಂತದ ಲಾಕ್ ಡೌನ್ ಅವಧಿಯಲ್ಲಿ ನಿಯಮಾವಳಿಗಳು ಕೊಂಚ ಸಡಿಲಿಕೆ ಮಾಡಲಾಗಿದೆ.

ಯಾವುದೇ ಝೋನ್ ನಲ್ಲಿ ಶಾಲೆ, ಕಾಲೇಜು ಆರಂಭವಾಗುವುದಿಲ್ಲ.

ಗ್ರೀನ್ ಝೋನ್ ಪಟ್ಟಿಯಲ್ಲಿರುವ ಪ್ರದೇಶಗಳಲ್ಲಿ ನಿರ್ಬಂಧಗಳನ್ನು ಸಡಿಲಿಸಲಾಗಿದೆ. ಆರೆಂಜ್ ಜೋನ್​ನ ಪಟ್ಟಿಯಲ್ಲಿರುವ ಪ್ರದೇಶಗಳಿಗೂ ವಿನಾಯಿತಿಗಳನ್ನು ಕಲ್ಪಿಸಲಾಗಿದೆ. ಆದರೆ ರೆಡ್ ಜೋನ್​ನಲ್ಲಿರುವ ಪ್ರದೇಶಗಳಲ್ಲಿ ಕಠಿಣ ನಿಯಮಗಳು ಮುಂದುವರಿಯಲಿವೆ.

ಆಸ್ಪತ್ರೆಗಳ ಒಪಿಡಿ ತೆರೆದಿರಲಿದೆ.  ಗ್ರೀನ್ ಝೋನ್ ನಲ್ಲಿ ಬಸ್ ಸಂಚಾರವಿರಲಿದೆ. ಆದರೆ ಶೇ.50ರಷ್ಟು ಜನ ಇರಬಹುದು. ರೆಡ್ ಝೋನ್ ನಲ್ಲಿ ಲಾಕ್ ಡೌನ್ ಈಗಿನಂತೆಯೇ ಮುಂದುವರಿಯಲಿದ್ದು, ಆಟೋ, ಟ್ಯಾಕ್ಸಿ ಯಾವುದೂ ಓಡಾಡುವುದಿಲ್ಲ. ಹೊಟೆಲ್ ಗಳೂ ಬಂದ್ ಇರಲಿವೆ. ಮಾಲ್ ಗಳೂ ತೆರೆಯುವಂತಿಲ್ಲ. ಕಂಟೈನ್ ಮೆಂಟ್ ಝೋನ್ ನಿಂದ ಯಾರೂ ಹೊರಗಡೆ ಬರುವಂತಿಲ್ಲ.

ಬೆಂಗಳೂರು ನಗರ, ಬಾಗಲಕೋಟೆ, ವಿಜಯಪುರ, ಬೆಳಗಾವಿ, ಮೈಸೂರು, ಕಲಬುರ್ಗಿ ರೆಡ್ ಝೋನ್ ನಲ್ಲಿರಲಿದೆ. ಇಲ್ಲೆಲ್ಲ ಕಟ್ಟು ನಿಟ್ಟಿನ ಲಾಕ್ ಡೌನ್ ಮುಂದುವರಿಯಲಿದೆ.

ಶಿವಮೊಗ್ಗ, ಹಾಸನ, ಯಾದಗಿರಿ, ಚಾಮರಾಜನಗರ, ಉಡುಪಿ, ಕೊಡಗು, ಚಿತ್ರದುರ್ಗ, ಕೊಪ್ಪಳ, ಹಾವೇರಿ, ರಾಯಚೂರು, ರಾಮನಗರ, ಚಿಕ್ಕಮಗಳೂರು, ಕೋಲಾರ, ಕೊಡಗು ಇವು ಗ್ರೀನ್ ಝೋನ್ ನಲ್ಲಿ ಬರಲಿವೆ.

ಉಳಿದ ಜಿಲ್ಲೆಗಳು ಆರೇಂಜ್ ಝೋನ್ ನಲ್ಲಿ ಬರಲಿವೆ.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button