ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೊರೊನಾ ಲಾಕ್ ಡೌನ್ ನಿಂದ ಸಂಕಷ್ಟಕ್ಕೀಡಾಗಿರುವ ನಿರ್ಗತಿಕರಿಗೆ ಟಿ.ನಾಗರಾಜ್ ಅವರ ಮಿತ್ರ ಕೂಟ ಪ್ರತಿದಿನ ಮಧ್ಯಾಹ್ನ ಊಟ ನೀಡುವ ಮೂಲಕ ಮಾನವೀಯತೆ ಮೆರೆದಿದೆ.
ಬೆಂಗಳೂರಿನ ಬಸವನಗುಡಿ ಡಿ.ವಿ.ಜಿ ರಸ್ತೆಯಲ್ಲಿ ನಾಲ್ಕು ದಶಕಗಳಿಂದ ನ್ಯೂ ಬಾಂಡ್ ಟೆಕ್ಸ್ ಟೈಲ್ಸ್ ವ್ಯವಹಾರ ನಿರ್ವಹಿಸುತ್ತಿರುವ ನಾಗರಾಜ್ ತಮ್ಮ ಮಿತ್ರ ಕೂಟದಿಂದ ಇದೀಗ ಲಾಕ್ ಡೌನ್ ನಿಂದ ಸಂಕಷ್ಟದಲ್ಲಿರುವವರಿಗೆ ನೆರವಿನ ಹಸ್ತಚಾಚಿದ್ದಾರೆ. ದಿನಗೂಲಿಗಳಿಗೆ, ಅಶಕ್ತರಿಗೆ, ಬಿಕ್ಷುಕರಿಗೆ, ಬಿಬಿಎಂಪಿ ದಿನಗೂಲಿಗಳಿಗೆ, ಪುಟ್ ಪಾತ್ ನಲ್ಲಿ ಕಾರ್ಯನಿರ್ವಹಿಸುವವರಿಗೆ ಸ್ನೇಹಿತರ ಜೊತೆಗೂಡಿ ತಮ್ಮ ಅಂಗಡಿ ಮುಂದೆಯೇ ಪ್ರತಿದಿನ 300 ಜನರಿಗೆ ಉಚಿತ ಊಟ ಅದರಜೊತೆ ಮಜ್ಜಿಗೆ, ಬಾಳೆಹಣ್ಣು, ನೀರು, ಬಿಸ್ಕೆಟ್ ಸಹ ವಿತರಿಸುತ್ತಿದ್ದಾರೆ.
ಲಾಕ್ ಡೌನ್ ಮುಗಿಯುವವರೆಗೂ ಅನ್ನದಾನ ಮಾಡಲು ನಾಗರಾಜ್ ಹಾಗೂ ಅವರ ಸ್ನೇಹಿತ ಪ್ರಮೋದ್ ಹಾಗೂ ತಂಡದವರು ನಿರ್ಧರಿಸಿದ್ದಾರೆ. ಈ ತಂಡದ ನಿಸ್ವಾರ್ಥ ಸೇವೆಯಿಂದ ಪ್ರತಿದಿನ ನೂರಾರು ಜನರು ಹೊಟ್ಟೆತುಂಬಾ ಊಟ ಮಾಡುತ್ತಿದ್ದು, ಮನಸ್ಸುತುಂಬಿ ಹಾರೈಸುತ್ತಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ