ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಲಾಕ್ ಡೌನ್ ನಿಂದ ಉಂಟಾದ ಆರ್ಥಿಕ ಸಂಕಷ್ಟದ ಬೆನ್ನಲ್ಲೇ ರಾಜ್ಯದಲ್ಲಿ ದರೋಡೆ, ಕಳ್ಳತನಗಳ ಹಾವಳಿ ಜೋರಾಗಿದೆ. ಹಾಡಹಗಲೇ ಚಾಕು ತೋರಿಸಿ ಬರೋಬ್ಬರಿ 45.50 ಲಕ್ಷ ಹಣ ಎಗರಿಸಿ ದರೋಡೆಕೋರರು ಎಸ್ಕೇಪ್ ಆಗಿರುವ ಘಟನೆ ಬೆಂಗಳೂರಿನ ಫ್ರೇಜರ್ ಟೌನ್‍ನಲ್ಲಿ ನಡೆದಿದೆ.
ಐಟಿಸಿ ಸಿಗರೇಟ್ ಕಂಪೆನಿ ಡಿಸ್ಟ್ರಿಬ್ಯೂಟರ್ ರಾಕೇಶ್ ಪೊಕರಾನ ಹಣ ಕಳೆದುಕೊಂಡವರು. ವ್ಯಾಪಾರಿಗಳು, ಸೇಲ್ಸ್ ಮ್ಯಾನ್‍ಗಳಿಂದ ಹಣ ಸಂಗ್ರಹಿಸಿ ತೆಗೆದುಕೊಂಡು ಹೋಗುತ್ತಿದ್ದಾಗ ಈ ಘಟನೆ ನಡೆದಿದೆ.
ಬೈಕ್‍ನಲ್ಲಿ ಹಣವಿದ್ದ ಕಾರನ್ನು ಹಿಂಬಾಲಿಸಿ ಮೊದಲಿಗೆ ಕಾರಿಗೆ ಡಿಕ್ಕಿ ಹೊಡೆದಿದ್ದಾರೆ. ಬಳಿಕ ನಾಲ್ವರು ಕಾರನ್ನು ಅಡ್ಡಗಟ್ಟಿ ಹಣವನ್ನು ಎಗರಿಸಿ ಪರಾರಿಯಾಗಿದ್ದಾರೆ. ಈ ಘಟನೆ ಸಂಬಂಧ ರಾಕೇಶ್ ಪುಲಿಕೇಶಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
45.50 ಸಾವಿರ ಹಣವನ್ನು ಬಿಸ್ಕೆಟ್ ತುಂಬುವ ಕಾರ್ಡ್ ಬೋರ್ಡ್ ಬಾಕ್ಸಿನಲ್ಲಿ ಹಾಕಿ ಮಾರುತಿ ವ್ಯಾಗನರ್ ಕಾರಿನಲ್ಲಿ ನಾನು ಮತ್ತು ಚಾಲಕ ಹೋಗುತ್ತಿದ್ದೆವು. ಬಾಕ್ಸನ್ನು ಕಾರಿನ ಮುಂಭಾಗದ ಸೀಟಿನ ಕೆಳಗೆ ಇಟ್ಟಿದ್ದೆ. ಫ್ರೇಜರ್ ಟೌನ್ ಬಳಿ ಬೈಕಿನಲ್ಲಿ ಬರುತ್ತಿದ್ದವರು ಕಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದರು. ಆದರೂ ನಾವು ಕಾರನ್ನ ನಿಲ್ಲಿಸದೆ ಹೋಗುತ್ತಿದ್ದೆವು. ಆದರೆ ಬೈಕಿನಲ್ಲಿದ್ದವರು ನಮ್ಮನ್ನು ಫಾಲೋ ಮಾಡಿಕೊಂಡು ಬಂದು ಕಾರನ್ನ ಅಡ್ಡಗಟ್ಟಿದರು. ನಂತರ ಓರ್ವ ಕಾರಿನಲ್ಲಿದ್ದ ಬಾಕ್ಸ್ ತೆಗೆದುಕೊಳ್ಳಲು ಬಂದ. ಈ ವೇಳೆ ನಾನು ಪ್ರಶ್ನೆ ಮಾಡಿದ್ದಕ್ಕೆ ನನಗೆ ಮತ್ತು ಚಾಲಕನಿಗೆ ಚಾಕುವನ್ನು ತೋರಿಸಿ ಹಣವನ್ನು ಎತ್ತಿಕೊಂಡು ಬೈಕಿನಲ್ಲಿ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ