Latest

ಹಿರಿಯ ನಟ ಲೋಹಿತಾಶ್ವ ಅವರಿಗೆ ಹೃದಯಾಘಾತ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಹಿರಿಯ ನಟ ಲೋಹಿತಾಶ್ವ ಅವರಿಗೆ ಹೃದಯಾಘಾತವಾಗಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಲೋಹಿತಾಶ್ವ ವಯೋಸಹಜ ಕಾಯಿಲೆಯಿಂದ ಬಳಲುತ್ತಿದರು. ನಿನ್ನೆ ರಾತ್ರಿ ಹೃದಯಾಘಾತವಾಗಿದ್ದು, ಕುಮಾರಸ್ವಾಮಿ ಲೇಔಟ್ ನ ಸಾಗರ್ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಮುಂದುವರೆದಿದೆ. ಎರಡು ದಿನಗಳ ಕಾಲ ಏನೂ ಹೆಳಲಾಗದು ಎಂದು ವೈದ್ಯರು ತಿಳಿಸಿದ್ದಾರೆ.

ಹಿರಿಯ ನಟ ಲೋಹಿತಾಶ್ವ ಚಿತ್ರ ನಟರಾಗಿ, ನಾಟಕಕಾರರಾಗಿ ಮಾತ್ರವಲ್ಲ ಇಂಗ್ಲೀಷ್ ಪ್ರಾಧ್ಯಾಪಕರಾಗಿದ್ದರು. ರಂಗನಾಟಕ ಹಾಗೂ ದೂರದರ್ಶನ ಧಾರಾವಾಹಿಗಳಲ್ಲಿಯೂ ಅಭಿನಯಿಸಿದ್ದರು.
ಒಂದು ತಿಂಗಳು ಶಾಲೆಗಳ ದಸರಾ ರಜೆ : ವೈಜ್ಞಾನಿಕ ಕಾರಣಗಳೊಂದಿಗೆ ಪ್ರತಿಪಾದನೆ

Home add -Advt

https://pragati.taskdun.com/latest/one-month-dussehra-vacation-for-schools-a-proposition-with-scientific-reasons/

Related Articles

Back to top button