LatestNationalPolitics

ಏ.16ಕ್ಕೆ ಲೋಕಸಭಾ ಚುನಾವಣೆ?: ಚುನಾವಣೆ ಆಯೋಗದ ಸ್ಪಷ್ಟನೆ

ಪ್ರಗತಿವಾಹಿನಿ ಸುದ್ದಿ, ನವದೆಹಲಿ: ಲೋಕಸಭಾ ಚುನಾವಣೆ ಏಪ್ರಿಲ್ 16ಕ್ಕೆ ನಡೆಯಲಿದೆಯೇ? ಚುನಾವಣೆ ಆಯೋಗದ ಹೆಸರಿನಲ್ಲಿ ವೈರಲ್ ಆಗಿರುವ ಸುತ್ತೋಲೆಯಲ್ಲಿ, ಲೋಕಸಭಾ ಚುನಾವಣೆಯ ಟೆಂಟೆಟಿವ್ ಡೇಟ್ ಎಂದು ಏಪ್ರಿಲ್ 16 ನಮೂದಾಗಿದ್ದು, ಎಲ್ಲೆಡೆ ಭಾರಿ ಸಂಚಲನಕ್ಕೆ ಕಾರಣವಾಗಿದೆ.

ಈ ಕುರಿತು ಸ್ಪಷ್ಟನೆ ನೀಡಿರುವ ಚುನಾವಣೆ ಆಯೋಗ, ಚುನಾವಣೆ ಸಿದ್ಧತೆಯ ಹಿನ್ನೆಲೆಯಲ್ಲಿ ಏಪ್ರಿಲ್ 16ನ್ನು ಟೆಂಟೆಟಿವ್ ಡೇಟ್ ಎಂದು ನಮೂದಿಸಲಾಗಿದೆ. ಇದು ಚುನಾವಣೆ ನಡೆಯುವ ದಿನಾಂಕ ಎಂದು ಘೋಷಿಸಿಲ್ಲ. ಪ್ರತಿ ಹಂತದಲ್ಲಿ ಚುನಾವಣೆ ಸಿದ್ಧತೆ ಪೂರ್ಣಗೊಳಿಸಲು ಒಂದು ನಿಗದಿತ ದಿನವನ್ನು ಗುರಿಯಾಗಿಟ್ಟುಕೊಳ್ಳಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಏಪ್ರಿಲ್ 16ನ್ನು ನಮೂದಿಸಲಾಗಿದೆ ಎಂದು ತಿಳಿಸಿದೆ.

ಲೋಕಸಭಾ ಚುನಾವಣೆಗಾಗಿ ಕೇಂದ್ರ ಚುನಾವಣೆ ಆಯೋಗ ಈಗಾಗಲೆ ಪೂರ್ವ ಸಿದ್ಧತೆಗಳನ್ನು ಚುರುಕುಗೊಳಿಸಿದೆ. ಜಿಲ್ಲಾಮಟ್ಟಗಳಲ್ಲಿ ಸಹ ಹಲವಾರು ಸಭೆಗಳನ್ನು ನಡೆಸಲಾಗಿದ್ದು, ಎಲ್ಲ ತಯಾರಿ ನಡೆದಿದೆ. ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಚುನಾವಣೆ ನಡೆಯಲಿದೆ. ಆದರೆ ಈ ಕುರಿತು ಅಧಿಕೃತವಾಗಿ ದಿನಾಂಕ ಘೋಷಣೆಯಾಗಿಲ್ಲ. ಮಾರ್ಚ್ ತಿಂಗಳಲ್ಲಿ ಚುನಾವಣೆ ಆಯೋಗ ಪತ್ರಿಕಾಗೋಷ್ಠಿ ನಡೆಸಿ ದಿನಾಂಕ ಪ್ರಕಟಿಸಲಿದೆ. ಚುನಾವಣೆ 3 -4 ಹಂತಗಳಲ್ಲಿ ನಡೆಯಲಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button