ಪ್ರಗತಿವಾಹಿನಿ ಸುದ್ದಿ: ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಮತದಾರರನ್ನು ಸೆಳೆಯಲು ರಾಜಕೀಯ ಪಕ್ಷಗಳು ಇನ್ನಿಲ್ಲದ ಕಸರತ್ತು ನಡೆಸಿವೆ. ಈ ಮಧ್ಯೆ ಇಂದು ಬಿಜೆಪಿ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದೆ.
ನವದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ‘ಸಂಕಲ್ಪ ಪತ್ರ’ ಹೆಸರಿ ಬಿಜೆಪಿ ಪ್ರಣಾಳಿಕೆಯನ್ನು ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ ಬಿಡುಗಡೆ ಮಾಡಿದರು.
ಕೇಂದ್ರದ ಯೋಜನೆಗಳ ಫಲಾನುಭವಿಗಳಿಗೆ ಪ್ರಧಾನಿ ನರೇಂದ್ರ ಮೋದಿ, ಪ್ರಣಾಳಿಕೆಯ ಮೊದಲ ಪುಸ್ತಕಗಳನ್ನು ವಿತರಿಸಿದರು.
ಈ ವೇಳೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರಣಳಿಕೆಯಲ್ಲಿನ ಪ್ರಮುಖ ಗ್ಯಾರಂಟಿ ಅಮ್ಶಗಳನ್ನು ಘೋಷಿಸಿದರು.
70 ವರ್ಷ ಮೇಲ್ಪಟ್ಟವರಿಗೂ ಆಯುಷ್ಮಾನ್ ಭಾರತ್ ಯೋಜನೆಯಡಿ 5 ಲಕ್ಷದವರೆಗೆ ಉಚಿತ ಚಿಕಿತ್ಸೆ
ಔಷಧಿ ಕೇಂದ್ರಗಳಲ್ಲಿ ಶೇ.80ರಷ್ಟು ರಿಯಾಯಿತಿಯೊಂದಿಗೆ ಔಷಧ ವಿತರಣೆ
ಭವಿಷ್ಯದಲ್ಲಿ 10 ಕೋಟಿ ರೈತರಿಗೆ ಪಿಎಂ ಕಿಸಾನ್ ಸಮ್ಮಾನ್ ನಿಧಿ
ಬಡವರಿಗಾಗಿ 3 ಕೋಟಿ ಮನೆಗಳ ನಿರ್ಮಾಣ
ಮನೆ ಮನೆಗೂ ಪೈಪ್ಡ್ ಅಡುಗೆ ಅನಿಲ ವ್ಯವಸ್ಥೆ
ಮುದ್ರಾ ಯೋಜನೆಯಡಿ ಸಿಗುವ ಸಾಲದ ಪ್ರಮಾಣ 10 ಲಕ್ಷ ರೂ ಮಿತಿ 20 ಲಕ್ಷಕ್ಕೆ ವಿಸ್ತರಣೆ
ಮಂಗಳಮುಖಿಯರಿಗೆ ಆಯುಷ್ಮಾನ್ ಭಾರತ್ ಯೋಜನೆಯಡಿ ಉಚಿತ ಚಿಕಿತ್ಸೆ
10 ಕೋಟಿ ಮಹಿಳೆಯರುಗೆ ಉದ್ಯೋಗ, ಉದ್ಯಮ ಕುರಿತ ಕೌಶಲ ತರಬೇತಿ
3 ಕೋಟಿ ಮಹಿಳೆಯರಿಗೆ ಲಕ್ ಪತಿ ದೀದಿ ಯೋಜನೆಯ ಗ್ಯಾರಂಟಿ
ಸೋಲಾರ್ ಮೂಲಕ ಉಚಿತ ವಿದ್ಯುತ್ ವ್ಯವಸ್ಥೆ
ವಂದೇ ಭಾರತ್ ನ ಮೂರು ಮಾದರಿಯ ವಂದೇ ಭಾರತ್ ಸ್ಲೀಪರ್, ವಂದೇ ಭಾರತ್ ಚೇರ್ ಕಾರ್ ಹಾಗೂ ವಂದೇ ಭಾರತ್ ಮೆಟ್ರೋ ರೈಲು ಜಾರಿ
ಕ್ರೀಡೆಯಲ್ಲಿ ಸ್ತ್ರೀಯರ ಪ್ರಾತಿನಿಧ್ಯ ಹೆಚ್ಚಿಸಲು ಹೊಸ ಯೋಜನೆಗಳ ಜಾರಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ