Kannada NewsKarnataka NewsLatest

*ಮತ್ತೆ ನಾಲ್ಕು ರೌಡಿಗಳ ವಿರುದ್ಧ ಗೂಂಡಾ ಕಾಯ್ದೆ ಜಾರಿ; 13 ಜನರು ಗಡಿಪಾರು*

ಪ್ರಗತಿವಾಹಿನಿ ಸುದ್ದಿ: ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಮತ್ತೆ ನಾಲ್ವರು ರೌಡಿಗಳ ವಿರುದ್ಧ ಗೂಂಡಾ ಕಾಯ್ದೆ ಜಾರಿಗೊಳಿಸಲಾಗಿದೆ.

ಇದೇ ವೇಳೆ 13 ಮಂದಿಯನ್ನು ದಕ್ಷಿಣ ಕನ್ನಡ.ಜಿಲ್ಲೆಯಿಂದ ಗಡೀಪಾರು ಮಾಡಲಾಗಿದೆ.

ಉಳ್ಳಾಲ ಅಂಬ್ಲಮೊಗರು ನಿವಾಸಿ ಹೇಮಚಂದ್ರ ಅಲಿಯಾಸ್ ಪ್ರಜ್ವಲ್ ಪೂಜಾರಿ(29), ಉಳ್ಳಾಲ ಕೈರಂಗಳ ನಿವಾಸಿ ನವಾಜ್ (36), ಕುದ್ರೋಳಿ ನಿವಾಸಿ ಅನೀಸ್ ಅಶ್ರಫ್ (26), ಬೋಳೂರು ನಿವಾಸಿ ಚರಣ್ ಶೇಟ್ (39) ವಿರುದ್ಧ ಗೂಂಡಾ ಕಾಯ್ದೆ ಜಾರಿಗೊಳಿಸಲಾಗಿದೆ. ಹೇಮಚಂದ್ರನ ವಿರುದ್ಧ ಕೊಲೆ ಯತ್ನ, ಕೊಲೆ, ಗಲಭೆ, ಕಿಡ್ನಾಪ್ ಸೇರಿದಂತೆ ಒಟ್ಟು 17 ಕೇಸುಗಳಿವೆ. ಅನೀಸ್ ಅಶ್ರಫ್ ವಿರುದ್ಧ ಕೊಲೆ ಯತ್ನ, ಡ್ರಗ್ಸ್, ಗಲಭೆ, ಕಳವು, ಹಲ್ಲೆ ಸೇರಿದಂತೆ 18 ಕೇಸುಗಳಿದೆ. ನವಾಜ್ ವಿರುದ್ಧ ಹಲ್ಲೆ, ಕೊಲೆಯತ್ನ, ಕಿಡ್ನಾಪ್ ಪ್ರಕರಣ ಸೇರಿ 13 ಕೇಸುಗಳಿವೆ. ಚರಣ್ ವಿರುದ್ಧ ಹಲ್ಲೆ, ಗಲಭೆ, ಕೊಲೆ ಯತ್ನ ಎರಡು ಕೊಲೆ, ಕಿಡ್ನಾಪ್, ರಾಬರಿ ಸೇರಿದಂತೆ 11 ಕೇಸುಗಳಿದೆ.

ಅಪರಾಧ ಹಿನ್ನೆಲೆಯಿರುವ 13 ಮಂದಿಯನ್ನು ಜಿಲ್ಲೆಯಿಂದ ಬೇರೆಡೆಗೆ ಗಡೀಪಾರು ಮಾಡಲು ಪೊಲೀಸ್ ಕಮಿಷನ‌ರ್ ಆದೇಶಿಸಿದ್ದಾರೆ. ಬೋಳಾರ ನಿವಾಸಿ ಜ್ಞಾನೇಶ್ ನಾಯಕ್(25), ಕುದ್ರೋಳಿ ನಿವಾಸಿ ಫಹಾದ್(25), ಉಳ್ಳಾಲ ಮೊಗವೀರಪಟ್ನ ನಿವಾಸಿ ಧನುಷ್ (30), ಕಾವೂರು ಶಾಂತಿನಗರದ ಮೊಹಮ್ಮದ್ ಸಾಹೇಬ್(28), ಮೂಡುಶೆಡ್ಡೆ ನಿವಾಸಿ ದೀಪಕ್ ಪೂಜಾರಿ(38), ಕೃಷ್ಣಾಪುರದ ಶಾಹಿಲ್ ಇಸ್ಮಾಯಿಲ್(27), ಉಳ್ಳಾಲ ಬಸ್ತಿಪಡು ನಿವಾಸಿ ಮಹಮ್ಮದ್ ಶಕೀರ್(30), ಉಳ್ಳಾಲ ಮೇಲಂಗಡಿಯ ಇಬ್ರಾಹಿಂ ಖಲೀಲ್ (22), ಕುದ್ರೋಳಿ ಧನುಷ್ (28), ಬಜಾಲಿನ ನೌಫಾಲ್ (35), ಮರೋಳಿಯ ಹವಿತ್ ಪೂಜಾರಿ(28), ಫರಂಗಿಪೇಟೆಯ ಕೌಶಿಕ್ ನಿಹಾಲ್ (24), ಬೆಳುವಾಯಿ ನಿವಾಸಿ ಸಂತೋಷ್ ಶೆಟ್ಟಿ (34) ವಿರುದ್ಧ ಗಡೀಪಾರು ಆದೇಶ ಮಾಡಲಾಗಿದೆ. ಈ ಹಿಂದೆ 48 ಮಂದಿಯ ವಿರುದ್ಧ ಗಡೀಪಾರು ಆದೇಶ ಹೊರಡಿಸಲಾಗಿತ್ತು.


Related Articles

Back to top button