
ಪ್ರಗತಿವಾಹಿನಿ ಸುದ್ದಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ದೇಶಾದ್ಯಂತ ನೀತಿ ಸಂಹಿತೆ ಜಾರಿಯಾಗಿದ್ದು, ಚುನಾವಣಾ ಅಕ್ರಮಗಳನ್ನು ತಡೆಯಲು ಚುನವಣಾ ಅಧಿಕಾರಿಗಳು ಹದ್ದಿನಕಣ್ಣಿಟ್ಟಿದ್ದಾರೆ. ಅಕ್ರಮವಾಗಿ ಸಾಗಿಸುವ ಹಣ, ವಸ್ತುಗಳು, ಒಡವೆ, ಮದ್ಯ ಸೇರಿದಂತೆ ಎಲ್ಲದರ ಮೇಲೆ ನಿಗಾ ವಹಿಸಿರುವ ಅಧಿಕಾರಿಗಳು ದಾಖಲೆಗಳಿಲ್ಲದ ವಸ್ತುಗಳನ್ನು ಜಪ್ತಿ ಮಾಡುತ್ತಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನಲ್ಲಿ 199 ಎಲ್ ಇ ಡಿ ಟಿವಿಗಳನ್ನು ಚುನಾವಣಾ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ನೆಲಮಂಗಲದ ಲ್ಯಾಂಕೋ ಟೋಲ್ ಬಳಿ ಚುನಾವಣಾಧಿಕಾರಿಗಳು ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ 199 ಎಲ್ ಇಡಿ ಟಿವಿ ಇರುವುದು ಪತ್ತೆಯಾಗಿದೆ. ಇದು ಇಸ್ಲಾಂಪುರದ ಬಾಬುಜಾನ್ ಎಂಬುವವರಿಗೆ ಸೇರಿದೆ ಎಂದು ತ್ತಿಳಿದುಬಂದಿದೆ.
ನೆಲಮಂಗಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ