Belagavi NewsBelgaum NewsElection News

*ಲೋಕಸಭಾ ಚುನಾವಣೆ: ಬೆಳಗಾವಿಯಲ್ಲಿ ಶೇ. 71.11ರಷ್ಟು ಮತದಾನ*

ಪ್ರಗತಿವಾಹಿನಿ ಸುದ್ದಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ನಡೆದ 2ನೇ ಹಂತದ ಮತದಾನ ಮುಕ್ತಾಯವಾಗಿದೆ. 14 ಕ್ಷೇತ್ರಗಳಲ್ಲಿಯೂ ಶಾಂತಿಯುತ ಮತದಾನವಾಗಿದೆ.

ಬೆಳಿಗ್ಗೆ 7 ಗಂಟೆಯಿಂದ ಆರಂಭವಾದ ಮತದಾನ ಪ್ರಕ್ರಿಯೆ ಸಂಜೆ 6 ಗಂಟೆಯವರೆಗೆ ನಡೆದಿದೆ. ಸಂಜೆ 6 ಗಂಟೆಗೆ ಮತದಾನ ಪ್ರಕ್ರಿಯೆ ಮುಕ್ತಾಯಗೊಂಡಿದೆ. ರಾಜ್ಯದಲ್ಲಿ ಸಂಜೆ 5 ಗಂಟೆಯವರೆಗೆ ಶೇ.66.05ರಷ್ಟು ಮತದಾನವಾಗಿದೆ.

ಇತ್ತೀಚಿನ ಮಾಹಿತಿ ಪ್ರಕಾರ ಬೆಳಗಾವಿಯಲ್ಲಿ ಶೇ. 71.11ರಷ್ಟು ಮತದಾನವಾಗಿದ್ದು, ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಶೇ.78.41ರಷ್ಟು ಮತದಾನವಾಗಿದೆ.

2019ರ ಲೋಕಸಭಾ ಚುನಾವಣಾ ಮತದಾನಕ್ಕಿಂತ ಈ ಬಾರಿ ಶೇ.3.56ರಷ್ಟು ಹೆಚ್ಚು ಮತದಾನವಾಗಿದೆ. 2019ರ ಚುನಾವಣೆಯಲ್ಲಿ ಬೆಳಗಾವಿಯಲ್ಲಿ ಶೇ.67.70ರಷ್ಟು ಮತದಾನವಾಗಿತ್ತು.

Related Articles

Back to top button