Election News

*ಲೋಕಸಭಾ ಚುನಾವಣೆ: ರಾಜ್ಯದಲ್ಲಿ ಮತದಾನದ ಅವಧಿ ಮುಕ್ತಾಯ; ಸಂಜೆ 5 ಗಂಟೆವರೆಗೆ ಯಾವ ಕ್ಷೇತ್ರದಲ್ಲಿ ಎಷ್ಟು ವೋಟಿಂಗ್? ಇಲ್ಲಿದೆ ಮಾಹಿತಿ*

ಪ್ರಗತಿವಾಹಿನಿ ಸುದ್ದಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ 2ನೇ ಹಂತದ ಮತದಾನದ ಅವಧಿ ಮುಕ್ತಾಯವಾಗಿದ್ದು, ಮತಗಟ್ಟೆಯಲ್ಲಿ ಇರುವವರಿಗಷ್ಟೇ ಕೊನೇ ಕ್ಷಣದಲ್ಲಿ ಮತ ಚಲಾವಣೆಗೆ ಅವಕಾಶ ನೀಡಲಾಗಿದೆ.

ರಾಜ್ಯದ 14 ಕ್ಷೇತ್ರಗಳಲ್ಲಿ ಏಪ್ರಿಲ್ 26ರಂದು ಮೊದಲ ಹಂತದ ಹಾಗೂ ಇಂದು ಉಳಿದ 14 ಲೋಕಸಭಾ ಕ್ಷೇತ್ರಗಳಲ್ಲಿ 2ನೇ ಹಂತದ ಮತದಾನ ನಡೆಯಿತು. ಸಂಜೆ 6 ಗಂಟೆವರೆಗೆ ಶೇ.66.05ರಷ್ಟು ಮತದಾನವಾಗಿದೆ.

ಆಯಾ ಕ್ಷೇತ್ರಗಳ ಶೇಕಡಾವಾರು ಮತದಾನ ಮಾಹಿತಿ:

ಚಿಕ್ಕೋಡಿ ಕ್ಷೇತ್ರದಲ್ಲಿ ಶೇ.72.75ರಷ್ಟು ಮತದಾನವಾಗಿದೆ.
ಬೆಳಗಾವಿ ಕ್ಷೇತ್ರ ಶೇ. 65.67
ಉತ್ತರ ಕನ್ನಡ ಶೇ.69.75
ಬಳ್ಳಾರಿ ಕ್ಷೇತ್ರ ಶೇ.68.94
ಬೀದರ್ ಕ್ಷೇತ್ರ ಶೇ.60.17
ದಾವಣಗೆರೆ ಕ್ಷೇತ್ರ ಶೇ.70.90
ಶಿವಮೊಗ್ಗ ಕ್ಷೇತ್ರ ಶೇ.72.07
ರಾಯಚೂರು ಕ್ಷೇತ್ರ ಶೇ.59.48
ಬಾಗಲಕೋಟೆ ಶೇ.65.55
ವಿಜಯಪುರ ಶೇ.60.95
ಕಲಬುರ್ಗಿ ಶೇ.57.20
ಕೊಪ್ಪಳ ಶೇ.66.05
ಹಾವೇರಿ ಶೇ.71.90
ಧಾರವಾಡ ಶೇ.67.15ರಷ್ಟು ಮತದಾನವಾಗಿದೆ.


Related Articles

Back to top button