Belagavi NewsBelgaum NewsElection NewsKannada NewsKarnataka NewsLatestPolitics

ಬಿಜೆಪಿ- ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಮಾರಾಮಾರಿ: ಓರ್ವನ ಮೇಲೆ ಮಾರಣಾಂತಿಕ ಹಲ್ಲೆ

​ಪ್ರಗತಿವಾಹಿನಿ ಸುದ್ದಿ, ಯರಗಟ್ಟಿ : ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನಲ್ಲಿ ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ಮಧ್ಯೆ ಗಲಾಟೆ ನಡೆದಿದ್ದು,  ಓರ್ವ ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. 

Related Articles

ಸವದತ್ತಿ ತಾಲೂಕಿನ ಭಂಡಾರಹಳ್ಳಿ ಗ್ರಾಮದ ಬೂತ್ ನಂಬರ್ 88ರಲ್ಲಿ ಗಲಾಟೆ​ ನಡೆದಿದೆ. ಕಾಂಗ್ರೆಸ್ ಬೂತ್ ಏಜೆಂಟ್ ಮೇಲೆ ಬಿಜೆಪಿ ಕಾರ್ಯಕರ್ತ​ರಿಂದ ಹಲ್ಲೆ ನಡೆದಿದೆ ಎಂದು ಆರೋಪಿಸಲಾಗಿದೆ.​ 

ಸವದತ್ತಿ ಪೊಲೀಸ್ ಠಾಣಾ ವ್ಯಾಪ್ತಿ​ಯಲ್ಲಿ ಘಟನೆ ನಡೆದಿದೆ. ​ಬಂ​ಡಾರಹಳ್ಳಿಯ ಹಣಮಂತಪ್ಪಾ ಭೀಮಪ್ಪಾ ಅರಭಾಂವಿ (ವಯಸ್ಸು 48 ವರ್ಷ) ದೂರು ದಾಖಲಿಸಿದ್ದಾರೆ. ವಿಠಲ ಅರ್ಜುನ ನಿಕ್ಕಂ ಸಾ॥ ಬಂಡಾರಹಳ್ಳಿ ತಾ।। ಸವದತ್ತಿ,  ಬುಜಂಗ ಕೃಷ್ಣಾಜಿರಾವ್ ನಿಕ್ಕಂ ಸಾ।। ಬಂಡಾರಹಳ್ಳಿ ತಾ।।ಸವದತ್ತಿ, ಸುನೀಲ ಮಾರುತಿರಾವ್ ನಿಕ್ಕಂ ಸಾ॥ ಬಂಡಾರಹಳ್ಳಿ ತಾ।। ಸವದತ್ತಿ, ಪುಂಡಲೀಕ ಮಾರುತಿರಾವ್ ನಿಕ್ಕಂ ಸಾ॥ಬಂಡಾರಹಳ್ಳಿ ತಾ॥ಸವದತ್ತಿ ಹಾಗೂ ನಾಗಪ್ಪಾ ಮಹಾದೇವಪ್ಪಾ ಬನ್ನೂರ ಸಾ।।ಬಂಡಾರಹಳ್ಳಿ ತಾ||ಸವದತ್ತಿ ಎನ್ನುವವರ ಮೇಲೆ ದೂರು ದಾಖಲಿಸಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button