Belagavi NewsBelgaum NewsKannada NewsKarnataka NewsLatestPolitics

ಕೆ.ಎಸ್.ಆರ್.ಟಿಸಿ ಮುಚ್ಚುವ ಸ್ಥಿತಿ ಬರಲಿದೆ; ಕರ್ನಾಟಕ ಕತ್ತಲಲ್ಲಿ ಮುಳುಗಲಿದೆ; ಮಾಜಿ ಸಿಎಂ ಬೊಮ್ಮಾಯಿ ಭವಿಷ್ಯ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ರಾಜ್ಯ ಕಾಂಗ್ರೆಸ್ ಸರ್ಕಾರದ ಉಚಿತ ಯೋಜನೆಗಳ ವಿರುದ್ದ ಕಿಡಿ ಕಾರಿರುವ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ, ಇನ್ನು ಸ್ವಲ್ಪ ದಿನದಲ್ಲಿ ಕೆ ಎಸ್ ಆರ್ ಟಿಸಿ ಮುಚ್ಚುವ ಸ್ಥಿತಿ ಬರುತ್ತೆ, ಕರ್ನಾಟಕ ಕತ್ತಲಲ್ಲಿ ಮುಳುಗುತ್ತೆ ಎಂದು ಭವಿಷ್ಯ ನುಡಿದಿದ್ದಾರೆ.

ಬೆಳಗಾವಿಯಲ್ಲಿ ಮಾತನಾಡಿದ ಬಸವರಾಜ್ ಬೊಮ್ಮಾಯಿ, ಇದೇ ರೀತಿ ಉಚಿತ ಯೋಜನೆಗಳನ್ನು ಸರ್ಕಾರ ಕೊಡುತ್ತಾ ಹೋದರೆ ಇನ್ನು ಕೆಲವೇ ದಿನಗಳಲ್ಲಿ ಕೆ ಎಸ್ ಆರ್ ಟಿ ಸಿ ಮುಚ್ಚುವ ಸ್ಥಿತಿ ನಿರ್ಮಾಣವಾಗುತ್ತೆ. ಡೀಸೆಲ್ ಗೂ ಹಣವಿಲ್ಲದೇ ಬಸ್ ಗಳು ನಿಲ್ಲುವ ಪರಿಸ್ಥಿತಿ ಬರಲಿದೆ ಅಷ್ಟೇ ಯಾಕೆ ಈ ರೀತಿ ಉಚಿತ ವಿದ್ಯುತ್ ಕೊಟ್ಟರೆ, ಕೆಲವೇ ದಿನಗಳಲ್ಲಿ ಇಡೀ ಕರ್ನಾಟಕ ಕತ್ತಲಲ್ಲಿ ಮುಳುಗುತ್ತೆ. ವಿದ್ಯುತ್ ಉತ್ಪಾದನೆ ಮಾಡಲು ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗಲಿದೆ ಬರೆದಿಟ್ಟುಕೊಳ್ಳಿ ಎಂದು ವಾಗ್ದಾಳಿ ನಡೆಸಿದ್ದಾರೆ.

Related Articles
Home add -Advt

ರಾಜ್ಯದಲ್ಲಿ ಮಳೆ ಇಲ್ಲ, ಜಲಾಶಯಗಳಲ್ಲಿ ನೀರಿಲ್ಲ, ಜನ, ಜಲಚರಗಳು ನೀರಿಲ್ಲದೇ ಸಂಕಷ್ಟಕ್ಕೀಡಾಗಿದ್ದಾರೆ. ಆದರೆ ಸರ್ಕಾರಕ್ಕೆ ಇದ್ಯಾವುದರ ಚಿಂತೆಯೂ ಇಲ್ಲ. ಅಕ್ಕಿ ಕೊಟ್ಟಿಲ್ಲ ಎಂದು ಕೇಂದ್ರದ ವಿರುದ್ಧ ಸರ್ಕಾರವೇ ಪ್ರತಿಭಟನೆ ನಡೆಸಿದೆ. ಇವರಿಗ್ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.

Related Articles

Back to top button