Latest

ರಾಯಬಾಗ ಅಬಕಾರಿ ಅಧಿಕಾರಿಗಳ ದಾಳಿ; ಒಂದೂವರೆ ಲಕ್ಷ ಮೌಲ್ಯದ ಗಾಂಜಾ ವಶ

ಪ್ರಗತಿವಾಹಿನಿ ಸುದ್ದಿ; ಚಿಕ್ಕೋಡಿ: ಕಬ್ಬಿನ ಗದ್ದೆಯಲ್ಲಿ ಅಕ್ರಮವಾಗಿ ಬೆಳೆದಿದ್ದ ಗಾಂಜಾವನ್ನು ಗಿಡಗಳನ್ನು ರಾಯಬಾಗ ಅಬಕಾರಿ ಇನ್ಸಪೆಕ್ಟರ್ ಜೆಟ್ಟೆಪ್ಪಾ ಮಾಳಾಬಗಿ ನೇತೃತ್ವದಲ್ಲಿ ಖಚಿತ ಮಾಹಿತಿ ಮೆರೆಗೆ ದಾಳಿ ನಡೆಸಿ ವಶಪಡಿಸಿಕೊಳ್ಳಲಾಗಿದೆ.

ಅಥಣಿ ಅಬಕಾರಿ ಡಿವಾಎಸ್ಪಿ ಎಲ್.ಎಸ್ ಸಲಗರೆ ಹಾಗೂ ರಾಯಬಾಗ ತಹಶಿಲ್ದಾರ ಆರ್ ಎಚ್ ಭಾಗವಾನ ಮಾರ್ಗದರ್ಶನದಲ್ಲಿ ರಾಯಬಾಗ ಅಬಕಾರಿ ಇನ್ಸ್‌ಪೆಕ್ಟರ್ ಜೆಟ್ಟೆಪ್ಪ ಅವರು ರಾಯಬಾಗ ತಾಲೂಕಿನ ಚಿಂಚಲಿ ಪಟ್ಟಣದ ಗಣಿಕೋಡಿಯ ಸರ್ವೆ ನಂಬರ 456/5 ರಲ್ಲಿ ಕಬ್ಬಿನ ತೋಟದಲ್ಲಿ ಒಂದೂವರೆ ಲಕ್ಷ ಮೌಲ್ಯದ 15 ಕೆ.ಜಿಯ ಸುವಾರು 14 ಅಡಿ ಎತ್ತರದ ಬೃಹತ್ತಾಕಾರವಾಗಿ ಬೆಳದ 4 ಹಸಿ ಗಾಂಜಾ ಮರಗಳನ್ನು ವಶಪಡಿಸಿಕೊಂಡಿದ್ದಾರೆ.

ಜಮೀನಿನ ಮಾಲೀಕ ಅಣ್ಣಾಸಾಬ ಬಾಬು ಧರ್ಮಣ್ಣವರ ಸಾ: ಹಾರುಗೇರಿ ಇತನ ವಿರುದ್ಧ ರಾಯಬಾಗ ಅಬಕಾರಿ ನೀರಿಕ್ಷಕರ ಕಚೇರಿಯಲ್ಲಿ ಪ್ರಕರಣ ದಾಖಲಾಗಿದೆ.

ಕಾರ್ಯಾಚರಣೆಯಲ್ಲಿ ಅಥಣಿ ಅಬಕಾರಿ ಉಪ ಅಧೀಕ್ಷಕರಾದ ಎಲ್.ಎಸ್ ಸಲಗರೆ, ರಾಯಬಾಗ ತಹಶಿಲ್ದಾರ ಆರ್ ಎಚ್ ಭಾಗವಾನ,ರಾಯಬಾಗ ಅಬಕಾರಿ ಇನ್ಸಪೆಕ್ಟರ್ ಜೆಟ್ಟೆಪ್ಪಾ ಮಾಳಾಬಗಿ, ಅಬಕಾರಿ ನಿರೀಕ್ಷಕರಾದ ವಿಜಯಕುಮಾರ ಮೆಳವಂಕಿ ಹಾಗೂ ಸಂಜಯಕುಮಾರ ಅಸ್ಕಿ, ಉಪ ನಿರೀಕ್ಷಕರಾದ ಜಗದೀಶ ಕಬ್ಬೂರಿ, ಸಿಬ್ಬಂದಿಗಳಾದ ಬಿ.ಎಸ್ ಪಾಟೀಲ, ಮಹಾದೇವ ಸಾಲೂಟಿಗಿ, ಸದಾಶಿವ ಚಿಂಚಲಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು.
ಗ್ರಾಮ ಪಂಚಾಯಿತಿ ಅಧ್ಯಕ್ಷರ ಟೇಬಲ್ ಎದುರೇ ನೇಣು ಬಿಗಿದುಕೊಂಡ ನೌಕರ

Home add -Advt

Related Articles

Back to top button