Election NewsPolitics

*ಲೋಕಸಭಾ ಚುನಾವಣೆ ಮತದಾನೋತ್ತರ ಸಮೀಕ್ಷೆ ಪ್ರಕಟ*

ಪ್ರಗತಿವಾಹಿನಿ ಸುದ್ದಿ: ಲೋಕಸಭಾ ಚುನಾವಣೆಯ ಕೊನೆ ಹಂತದ ಮತದಾನ ಇಂದು ಮುಕ್ತಾಯವಾಗಿದೆ. ಜೂನ್ 4ರಂದು ಲೋಕಸಭಾ ಚುನಾವಣೆ ಫಲಿತಾಂಶ ಹೊರಬೀಳಲಿದೆ. ಚುನಾವಣಾ ಮತದಾನೋತ್ತರ ಸಮೀಕ್ಷೆ ಪ್ರಕಟವಾಗಿದ್ದು, ಈಬಾರಿ ಕೇಂದ್ರದಲ್ಲಿ ಮತ್ತೊಮ್ಮೆ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುವುದು ಬಹುತೇಕ ಖಚಿತವಾಗಿದೆ. ಆದರೆ ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟ ತನ್ನ ಬಲ ಹೆಚ್ಚಿಸಿಕೊಳ್ಳಲಿದೆ.

ಮತದಾನೋತ್ತರ ಸಮೀಕ್ಷೆ ಪ್ರಕಾರ ಯಾವ ಪಕ್ಷಕ್ಕೆ ಎಷ್ಟು ಸ್ಥಾನ? ಯಾವ ರಾಜ್ಯದಲ್ಲಿ ಯಾವ ಪಕ್ಷ ಎಷ್ಟು ಸೀಟು ಪಡೆಯಬಹುದು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ಲೋಕ್‌ಪೋಲ್ ಮತದಾನೋತ್ತರ ಸಮೀಕ್ಷೆ ಪ್ರಕಾರ
ಎನ್‌ಡಿಎಗೆ 325 ರಿಂದ 335
ಇಂಡಿಯಾ ಮೈತ್ರಿಕೂಟ 155-165
ಇತರರಿಗೆ 48-55 ಸ್ಥಾನ

ರಿಪಬ್ಲಿಕ್ ಟಿವಿ, ಪಿಎಂಎಆರ್‌ಕ್ಯೂ ಮತದಾನೋತ್ತರ ಸಮೀಕ್ಷೆ
ಬಿಜೆಪಿಗೆ 359 ಸ್ಥಾನ
ಇಂಡಿಯಾ ಮೈತ್ರಿಕೂಟ 154 ಸ್ಥಾನ
ಇತರರಿಗೆ 30 ಸ್ಥಾನ ಸಾಧ್ಯತೆ

ಮ್ಯಾಟ್ರಿಜ್‌ ಎಕ್ಸಿಟ್‌ ಪೋಲ್
ಎನ್‌ಡಿಎ 353 ರಿಂದ 368 ಸ್ಥಾನ
ಇಂಡಿಯಾ ಮೈತ್ರಿಕೂಟ 118-133 ಸ್ಥಾನ
ಇತರರು 43-48 ಸ್ಥಾನ

ಜನ್‌ಕೀ ಬಾತ್​
ಎನ್‌ಡಿಎಗೆ 377
ಇಂಡಿಯಾಗೆ 151
ಇತರರಿಗೆ 15 ಸ್ಥಾನ

ನ್ಯೂಸ್‌ಎಕ್ಸ್‌ ಸಮೀಕ್ಷೆ
ಎನ್‌ಡಿಎಗೆ 371
ಇಂಡಿಯಾ ಮೈತ್ರಿಕೂಟ 125
ಇತರರಿಗೆ 47 ಸ್ಥಾನ

ಎನ್​ಡಿಟಿವಿ ಮತಗಟ್ಟೆ ಸಮೀಕ್ಷೆ
ಎನ್​ಡಿಎಗೆ 350 + ಸ್ಥಾನ

ಟಿವಿ 9 ಸಮೀಕ್ಷೆ ಪ್ರಕಾರ ಬಿಜೆಪಿ ಸರಳ ಬಹುಮತ ಪಡೆಯಲಿದ್ದು, ಕಾಂಗ್ರೆಸ್ ನೇತೃತ್ವದ ‘ಇಂಡಿಯಾ’ ಮೈತ್ರಿಕೂಟ ಅಲ್ಪ ಸ್ಥಾನಗಳಿಗೆ ತೃಪ್ತಿಪಡಬೇಕಾದ ಸ್ಥಿತಿ ಇದೆ. ದಕ್ಷಿಣದ ರಾಜ್ಯಗಳ ಪೈಕಿ ತಮಿಳುನಾಡು ಮತ್ತು ಕೇರಳದಲ್ಲಿ ಬಿಜೆಪಿ ಈ ಬಾರಿ ಖಾತೆ ತೆರೆಯುವ ಸಾಧ್ಯತೆ ಇದೆ. ಕರ್ನಾಟಕ, ತಮಿಳುನಾಡು, ತೆಲಂಗಾಣಗಳಲ್ಲಿ ‘ಇಂಡಿಯಾ’ ಒಕ್ಕೂಟದ ಸಾಧನೆ ಹೆಚ್ಚಿದೆ. ಉತ್ತರ ಭಾರತ ರಾಜ್ಯಗಳಲ್ಲಿ ಬಿಜೆಪಿಯ ಹೆಚ್ಚು ಸ್ಥಾನ ಪಡೆಯಲಿದೆ. ಆದರೆ ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಬಿಜೆಪಿಯ ಸ್ಥಾನ 2019ಕ್ಕಿಂತ ಕಡಿಮೆಯಾಗಲಿದೆ ಎಂದು ಹೇಳಲಾಗುತ್ತಿದೆ.

ಬಹುತೇಕ ಸಮೀಕ್ಷೆಗಳ ಪ್ರಕಾರ ಕರ್ನಾಟಕದಲ್ಲಿ ಬಿಜೆಪಿಗೆ 18 ಸ್ಥಾನ, ಕಾಂಗ್ರೆಸ್ 8 ಸ್ಥಾನ ಹಾಗೂ ಜೆಡಿಎಸ್ ಗೆ 2 ಸ್ಥಾನ ಲಭಿಸಲಿದೆ.

ಬಹುತೇಕ ಸಮೀಕ್ಷೆಗಳಲ್ಲಿ ಎನ್​​ಡಿಎಗೆ ಮೇಲುಗೈ ಸಾಧಿಸಲಿದ್ದು, ಕೆಲವು ರಾಜ್ಯಗಳಲ್ಲಿ ಬಿಜೆಪಿ ಕ್ಲೀನ್​ಸ್ವೀಪ್ ಮಾಡುವ ಸಾಧ್ಯತೆ ಇದೆ. ಟಿವಿ9 ಪೋಲ್​ಸ್ಟ್ರಾಟ್ ಮತಗಟ್ಟೆ ಸಮೀಕ್ಷೆ ಪ್ರಕಾರ ಐದು ರಾಜ್ಯಗಳಲ್ಲಿ ಬಿಜೆಪಿ ಕ್ಲೀನ್​ಸ್ವೀಪ್ ಮಡುವ ಸಾಧ್ಯತೆ ಇದೆ.

ಟಿವಿ 9 ಪೋಲ್​ಸ್ಟ್ರಾಟ್ ಸಮೀಕ್ಷೆ

ಆಂಧ್ರಪ್ರದೇಶ:
ಆಂಧ್ರಪ್ರದೇಶದಲ್ಲಿ 25 ಲೋಕಸಭಾ ಸ್ಥಾನಗಳಿವೆ. ಬಿಜೆಪಿ 2, ಕಾಂಗ್ರೆಸ್ 0, ವೈಎಸ್‌ಆರ್‌ಸಿಪಿ 13 ಮತ್ತು ಟಿಡಿಪಿ 9 ಸ್ಥಾನ

ತೆಲಂಗಾಣ:

ತೆಲಂಗಾಣದಲ್ಲಿ ಬಿಜೆಪಿ ಎರಡನೇ ದೊಡ್ಡ ಪಕ್ಷವಾಗಬಹುದು. ಬಿಜೆಪಿ 7 ಸ್ಥಾನ, ಕಾಂಗ್ರೆಸ್ 8 ಸ್ಥಾನ. ಎಐಎಂಐಎಂ ಮುಖ್ಯಸ್ಥ ಓವೈಸಿ ಹೈದರಾಬಾದ್‌ನಿಂದ ಗೆಲ್ಲಬಹುದು

ಕರ್ನಾಟಕ:

ಕರ್ನಾಟಕದಲ್ಲಿ ಬಿಜೆಪಿಗೆ ಹಿನ್ನಡೆ. 2019 ರಲ್ಲಿ 25 ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ ಈಬಾರಿ ಬಹುತೇಕ ಸಮೀಕ್ಷೆ ಪ್ರಕಾರ 18 ಸ್ಥಾನಗಳನ್ನು ಪಡೆಯಬಹುದು. ಕಾಂಗ್ರೆಸ್ 8 ಸ್ಥಾನಗಳನ್ನು ಪಡೆಯಬಹುದು. ಜೆಡಿಎಸ್ 2 ಸ್ಥಾನ ಪಡೆಯಬಹುದು

ಕೇರಳ:

20 ಲೋಕಸಭಾ ಸ್ಥಾನಗಳಲ್ಲಿ ಕಾಂಗ್ರೆಸ್ 13 ಸ್ಥಾನ. ಸಿಪಿಐ (ಎಂ) 2 ಸ್ಥಾನ, ಸಿಪಿಐ 1 ಸ್ಥಾನವನ್ನು ಪಡೆಯಬಹುದು. ಬಿಜೆಪಿ ಖಾತೆ ತೆರೆಯುತ್ತಿದೆ. ಬಿಜೆಪಿ 1 ಸ್ಥಾನವನ್ನು ಪಡೆಯಬಹುದು.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕೇರಳದ ವಯನಾಡ್ ಕ್ಷೇತ್ರದಿಂದ ಚುನಾವಣೆಯಲ್ಲಿ ಗೆಲ್ಲಬಹುದು ಎನ್ನಲಾಗಿದೆ.

ಮಧ್ಯಪ್ರದೇಶ:

29 ಲೋಕಸಭಾ ಕ್ಷೇತ್ರಗಳಿದ್ದು, ಬಿಜೆಪಿ ಕ್ಲೀನ್ ಸ್ವೀಪ್ ಮಾಡಲಿದೆ. ಕಾಂಗ್ರೆಸ್ ಕಲಿ ಕಮಲ್ ನಾಥ್ ಅವರ ಭದ್ರಕೋಟೆಯಲ್ಲಿ ಬಿಜೆಪಿ ಈ ಬಾರಿ ಭರ್ಜರಿ ಪ್ರದರ್ಶನ ನೀಡಲಿದೆ. ಕಮಲ್ ನಾಥ್ ಅವರ ಪುತ್ರ ನಕುಲ್ ನಾಥ್ ಛಿಂದ್ವಾರಾ ಕ್ಷೇತ್ರದಲ್ಲಿ ಸೋಲಬಹುದು ಎಂದು ಸಮೀಕ್ಷೆ ಹೇಳಿದೆ.

ತಮಿಳುನಾಡು:
ಬಿಜೆಪಿ ಸಂಸದರೇ ಇಲ್ಲದ ತಮಿಳುನಾಡಿನಲ್ಲಿ ಕೂಡ ಈ ಬಾರಿ ಬಿಜೆಪಿ ಖಾತೆ ತೆರೆಯಲಿದೆ. ಬಿಜೆಪಿಗೆ 1ರಿಂದ 3 ಸ್ಥಾನಗಳು ಲಭಿಸುವ ಸಾಧ್ಯತೆ ಇದೆ.

ಚಾಣಕ್ಯ ಸಮೀಕ್ಷೆ ಪ್ರಕಾರ
ಕರ್ನಾಟಕದಲ್ಲಿ ಬಿಜೆಪಿಗೆ 24 ಸ್ಥಾನ
ಟುಡೇಸ್ ಚಾಣಕ್ಯ ಮತಗಟ್ಟೆ ಸಮೀಕ್ಷೆಯ ಪ್ರಕಾರ, ಕರ್ನಾಟಕದಲ್ಲಿ ಎನ್​ಡಿಎ ಮೈತ್ರಿಗೆ 24 ಸ್ಥಾನ ದೊರೆಯಲಿದೆ. ಕಾಂಗ್ರೆಸ್​ಗೆ 4 ಸ್ಥಾನ ದೊರೆಯಲಿದೆ. ಇತರೆ 0


Related Articles

Back to top button