Latest

ಮರಳಿ ಮುಂಬೈ ದಾರಿ ಹಿಡಿದ ಶಾಸಕರು

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: 

ಬಂದ ದಾರಿಗೆ ಸುಂಕವಿಲ್ಲ ಎನ್ನುವಂತೆ ಮುಂಬೈನಿಂದ ಬಂದಿದ್ದ ಶಾಸಕರು ಮರಳಿ ಮುಂಬೈ ವಿಮಾನ ಏರಿದ್ದಾರೆ.

ಸುಪ್ರಿಂ ಕೋರ್ಟ್ ಆದೇಶದಂತೆ ಬೆಂಗಳೂರಿಗೆ ಆಗಮಿಸಿ ಸ್ಪೀಕರ್ ಕೈಗೆ ರಾಜಿನಾಮೆ ಸಲ್ಲಿಸಿ ಅವರೆಲ್ಲ ಮುಂಬೈಗೆ ವಾಪಸ್ಸಾಗಿದ್ದಾರೆ. ರಾಜಿನಾಮೆ ಸ್ವೀಕರಿಸಿದ ಸ್ಪೀಕರ್ ರಮೇಶಕುಮಾರ, ಪರಿಶೀಲನೆ ಬಳಿಕ ರಾಜಿನಾಮೆ ಅಂಗೀಕರಿಸುವುದಾಗಿ ಹೇಳುವ ಮೂಲಕ ಅದಕ್ಕೆ ಸಮಯ ಬೇಕು ಎಂದು ಸ್ಪಷ್ಟಪಡಿಸಿದ್ದಾರೆ.

ನಾನು ಯಾರ ಹಂಗಿನಲ್ಲೂ ಇಲ್ಲ.  ಇದ್ದರೆ ಅದು ಜನರ ಹಂಗಿನಲ್ಲಿ ಮಾತ್ರ. ಬೇರೆ ಯಾರೂ ನನ್ನನ್ನು ಹಿಡಿದಿಡಲು ಸಾಧ್ಯವಿಲ್ಲ ಎಂದು ಸ್ಪೀಕರ್ ಹೇಳಿದರು. ರಾಜಿನಾಮೆ ಕೊಟ್ಟು ಕೇವಲ 3 ಕೆಲಸದ ದಿನಗಳಾಗಿವೆ. ಅಷ್ಟರಲ್ಲೇ ವಿಳಂಬವಾಗಿದೆ ಎಂದು ಸುಪ್ರಿಂ ಕೋರ್ಟಿಗೆ ಹೋಗಿದ್ದಾರೆ. ಇದರ ಅರ್ಥ ಏನು ಎಂದು ಅವರು ಪ್ರಶ್ನಿಸಿದರು.

Home add -Advt

ಶುಕ್ರವಾರ ವಿಧಾನ ಮಂಡಳದ ಅಧಿವೇಶನ ಆರಂಭವಾಗಲಿದ್ದು, ಕಾಂಗ್ರೆಸ್ ಶಾಸಕರಿಗೆ ವಿಪ್ ಜಾರಿಗೊಳಿಸಲಾಗಿದೆ. ಆದರೆ ಅದಕ್ಕೆ ಕ್ಯಾರೆ ಅನ್ನದ ಅತೃಪ್ತರು ಮುಂಬೈ ವಿಮಾನವೇರಿದ್ದಾರೆ. ಅಧಿವೇಶನಕ್ಕೆ ಎಷ್ಟು ಶಾಸಕರು ಹಾಜರಾಗುತ್ತಾರೆ? ಅಲ್ಲಿ ಏನೆಲ್ಲ ನಾಟಕಗಳು ನಡೆಯಲಿವೆ ಕಾದು ನೋಡಬೇಕಿದೆ.

Related Articles

Back to top button