Election NewsKannada NewsKarnataka NewsNationalPolitics

*ಮೊದಲ ಹಂತದ ಮತದಾನ: ಮತ ಚಲಾಯಿಸಿದ ರಾಹುಲ್ ದ್ರಾವಿಡ್, ನಟ ಗಣೇಶ್ ದಂಪತಿ*

ಪ್ರಗತಿವಾಹಿನಿ‌ ಸುದ್ದಿ: ರಾಜ್ಯದಲ್ಲಿ ನಡೆಯುತ್ತಿರುವ ಮೊದಲ ಹಂತದ ಮತದಾನ ಹಿನ್ನೆಲೆ ಬೆಂಗಳೂರಿನ ಆರ್ ಆರ್ ನಗರದ ಮೌಂಟ್ ಕಾರ್ಮಲ್ ಮತಗಟ್ಟೆಗೆ ಗೋಲ್ಡನ್ ಸ್ಟಾರ್ ಗಣೇಶ್ ದಂಪತಿ ತಮ್ಮ‌ ಕುಟುಂಬ ಸಮೇತ ಬಂದು ಮತದಾನ ಮಾಡಿದ್ದಾರೆ. ಗಣೇಶ್ ಹಾಗೂ ಶಿಲ್ಪಾ ಗಣೇಶ್ ಅವರು ಸಾರ್ವಜನಿಕರೊಂದಿಗೆ ಸರದಿ ಸಾಲಿನಲ್ಲಿ ನಿಂತು ತಮ್ಮ ಮತ ಚಲಾವಣೆ ಮಾಡಿದರು. 

ಪತ್ನಿ ಮತ್ತು ಮಗನ ಜೊತೆ ಆಗಮಿಸಿ ಮೊದಲಿಗರಾಗಿ ಬಂದು ಟೀಂ ಇಂಡಿಯಾ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮತದಾನ ಮಾಡಿದ್ದಾರೆ.‌ ಬೆಳಗ್ಗೆ 7 ಗಂಟೆಗೆ ಮಲ್ಲೇಶ್ವರಂ ನ ಶಿಕ್ಷಾ ಸ್ಕೂಲ್ ಮತಗಟ್ಟೆಯಲ್ಲಿ ಮತದಾನ ಮಾಡಿದರು. ಮತ ಚಲಾವಣೆ ನಂತರ ಮಾತನಾಡಿದ ಅವರು ಮತ ಚಲಾವಣೆ ನಮ್ಮ ಸಂವಿಧಾನಿಕ ಹಕ್ಕು,  ದಯವಿಟ್ಟು ಎಲ್ಲರೂ ಮತದಾನ ಮಾಡಿ, ಮತದಾನ ಮಾಡಲು ಎಲ್ಲ ಬನ್ನಿ, ಪ್ರಜಾಪ್ರಭುತ್ವ‌ವನ್ನು ಮುಂದೆ ತರುವ ಅವಕಾಶ ಇದು, ವೋಟ್ ಮಾಡಲು ಹೊರಗೆ ಬನ್ನಿ. ಬೆಂಗಳೂರಲ್ಲಿ ಜಾಸ್ತಿ ಜನ ಬರಬೇಕು. ಚುನಾವಣಾ ಆಯೋಗ ಚೆನ್ನಾಗಿ ವ್ಯವಸ್ಥೆ ಮಾಡಿದೆ. ಯುವ ಜನತೆ ತಪ್ಪದೆ ಮತದಾನ ಮಾಡಿ ಎಂದು ದ್ರಾವಿಡ್ ಮನವಿ ಮಾಡಿದರು.

ಸಾರ್ವತ್ರಿಕ ಲೋಕಸಭಾ ಚುನಾವಣೆ ಅಂಗವಾಗಿ ಜಿಲ್ಲಾ ಚುನಾವಣಾಧಿಕಾರಿ ಮತ್ತು ಬಿಬಿಎಂಪಿಯ ಮುಖ್ಯ ಆಯುಕ್ತರಾದ  ತುಷಾರ್ ಗಿರಿ ನಾಥ್ ರವರು ಹಾಗೂ ಅವರ ಪತ್ನಿ ಮನಿಕಾ ಗಿರಿನಾಥ್ ರವರು ಶುಕ್ರವಾರ ಬೆಳಗ್ಗೆ 7.40ಕ್ಕೆ ಜಕ್ಕೂರಿನ ಮಾದರಿ ಪ್ರಾಥಮಿಕ ಶಾಲೆಯಲ್ಲಿರುವ ಮತಗಟ್ಟೆಗೆ ತೆರಳಿ ಸಾರ್ವಜನಿಕರ ಜೊತೆ ಸರದಿ ಸಾಲಿನಲ್ಲಿ ತಮ್ಮ ಮತ ಚಲಾಯಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button