Kannada NewsLatestNational

*RBI ರೆಪೋ ದರ ಯಥಾ ಸ್ಥಿತಿ ಮುಂದುವರಿಕೆ*

ಪ್ರಗತಿವಾಹಿನಿ ಸುದ್ದಿ: ಭಾರತೀಯ ರಿಸರ್ವ್ ಬ್ಯಾಂಕ್ (RBI) ತನ್ನ ದ್ವೈಮಾಸಿಕ ಹಣಕಾಸು ನೀತಿ ಸಮಿತಿ ಸಭೆಯಲ್ಲಿ ಕೈಗೊಂಡ ನಿರ್ಧಾರಗಳನ್ನು ಪ್ರಕಟಿಸಿದೆ. ಪ್ರಮುಖ ಬಡ್ಡಿದರವಾದ ರೆಪೋ ದರವನ್ನು ಶೇ. 5.25 ರಲ್ಲಿ ಯಥಾಸ್ಥಿತಿಯಲ್ಲಿ ಕಾಯ್ದುಕೊಳ್ಳಲು ನಿರ್ಧರಿಸಿದೆ.

ಜಾಗತಿಕ ಅಸ್ಥಿರತೆ ಮತ್ತು ಹಣದುಬ್ಬರದ ಕಳವಳಗಳ ನಡುವೆಯೂ ಆರ್‌ಬಿಐ ತನ್ನ ತಟಸ್ಥ ನೀತಿ ನಿಲುವನ್ನು ಮುಂದುವರಿಸಿದೆ. ಆಗಸ್ಟ್ 3ರಿಂದ ನಡೆದ ಎಂಪಿಸಿ ಸಭೆ ಇಂದು ಮುಕ್ತಾಯಗೊಂಡಿದ್ದು, ಆರ್ ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಪಾಲಿಸಿ ನಿರ್ಧಾರಗಳನ್ನು ಪ್ರಕಟಿಸಿದ್ದಾರೆ.

Home add -Advt

ರೆಪೋ ದರಶೇ. 5.25
ನೀತಿ ನಿಲುವು ತಟಸ್ಥ
ಎಸ್‌ಡಿಎಫ್ ದರ ಶೇ. 5.00
ಎಂಎಸ್‌ಎಫ್ ದರ ಶೇ. 5.50 ರಲ್ಲಿ ಮುಂದುವರೆಯಲಿದೆ.

ರೀಟೇಲ್ ಹಣದುಬ್ಬರ ಅಥವಾ ಸಿಪಿಐ ಆಧಾರಿತ ಹಣದುಬ್ಬರವು ನಿಗದಿತ ಗುರಿಗಿಂತ ಹೆಚ್ಚು ಇರಲಿದೆ ಎಂದು ತಿಳಿಸಿದ್ದಾರೆ. ಆರ್​ಬಿಐನ ಎಂಪಿಸಿ ಸಭೆಯು ಈ ವರ್ಷದಲ್ಲಿ ಹಣದುಬ್ಬರ ಶೇ. 5ರಷ್ಟು ಇರಬಹುದು ಎಂದು ಅಂದಾಜು ಮಾಡಿದೆ.

2026-27ರಲ್ಲಿ ಹಣದುಬ್ಬರ ಈ ಕೆಳಗಿಂತೆ ಇರಬಹುದು
ಒಟ್ಟು ರೀಟೇಲ್ ಹಣದುಬ್ಬರ ಶೇ. 5
ಕ್ವಾರ್ಟರ್ 1: ಶೇ. 5.3
ಕ್ವಾರ್ಟರ್ 2: ಶೇ. 4.7
ಕ್ವಾರ್ಟರ್ 3: ಶೇ. 4.9
ಕ್ವಾರ್ಟರ್ 4: ಶೇ. 5.5

Related Articles

Back to top button