Belagavi NewsBelgaum NewsElection News

*ಮನೆ‌ ಮನೆಗೆ ತೆರಳಿ‌ ಮತದಾರರ‌ ಚೀಟಿ ವಿತರಿಸಿದ ಚುನಾವಣಾಧಿಕಾರಿ ನಿತೇಶ್ ಪಾಟೀಲ*

ಪ್ರಗತಿವಾಹಿನಿ ಸುದ್ದಿ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮೇ 7 ರಂದು ಮತದಾನ ನಡೆಯುವ ಹಿನ್ನೆಲೆಯಲ್ಲಿ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ನಗರದಲ್ಲಿ ಮನೆ ಮನೆಗೆ ತೆರಳಿ ಮತದಾರರ ಚೀಟಿ ವಿತರಿಸಿದರು.

Related Articles

ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಗೊಂಧಳಿ ಗಲ್ಲಿಯ ಮನೆಗಳಿಗೆ ಶುಕ್ರವಾರ(ಮೇ‌ 3) ಭೇಟಿ ನೀಡಿ ಮತದಾರರ ಚೀಟಿಗಳನ್ನು ವಿತರಿಸಿದರು.

ಈ‌ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು, ಮತದಾರರು ತಮ್ಮ ಹೆಸರಿರುವ ಮತಗಟ್ಟೆಗಳನ್ನು ಗುರುತಿಸಲು ಮತದಾರರ ಚೀಟಿಯಿಂದ ಅನುಕೂಲವಾಗಲಿದೆ.

Home add -Advt

ಮತಗಟ್ಟೆಗಳ ಬಗ್ಗೆ ಖಚಿತ ಮಾಹಿತಿ ಲಭಿಸುವುದರಿಂದ ಮತದಾನದ ದಿನದಂದು ಮತಗಟ್ಟೆ ಹುಡುಕುವ ಗೊಂದಲ ಇರುವುದಿಲ್ಲ ಎಂದರು.

ಮತದಾರರಿಗೆ ಅನುಕೂಲ ಕಲ್ಪಿಸುವುದರ ಜತೆಗೆ ಮತದಾನ ಪ್ರಮಾಣವನ್ನು ಹೆಚ್ಚಿಸುವ ಉದ್ದೇಶದಿಂದ ಆಯಾ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬಿ.ಎಲ್.ಓ. ಗಳು ಮನೆ‌ ಮನೆಗಳಿಗೆ ತೆರಳಿ ಮತದಾರರ ಚೀಟಿಗಳನ್ನು ವಿತರಿಸಲಿದ್ದಾರೆ. ಸಾರ್ವಜನಿಕರು ಮತದಾರರ‌ ಚೀಟಿಗಳನ್ನು ಪಡೆದುಕೊಂಡು ನಿಗದಿತ ಮತಗಟ್ಟೆಗಳಿಗೆ ತೆರಳಿ‌ ತಪ್ಪದೇ ತಮ್ಮ ಅಮೂಲ್ಯ ಮತವನ್ನು ಚಲಾಯಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಮನವಿ ಮಾಡಿಕೊಂಡರು.

ಪ್ರೊಬೇಷನರಿ ಐಎಎಸ್‌. ಅಧಿಕಾರಿ ಶುಭಂ ಶುಕ್ಲಾ, ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಯೂ ಆಗಿರುವ ಮಹಾನಗರ ಪಾಲಿಕೆ ಆಯುಕ್ತ ಪಿ.ಎನ್.ಲೋಕೇಶ್ ಮತ್ತಿತರರು ಉಪಸ್ಥಿತರಿದ್ದರು.

Related Articles

Back to top button