Kannada NewsKarnataka NewsLatestNational

*ಲೋಕಸಭೆಗೆ ನುಗ್ಗಿದ ದುಷ್ಕರ್ಮಿಗಳ ಗುರುತು ಪತ್ತೆ*

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಲೋಕಸಭಾ ಕಲಾಪದ ವೆಳೆ ಭದ್ರತಾ ಲೋಪವುಂಟಾಗಿದ್ದು, ಇಬ್ಬರು ದುಷ್ಕರ್ಮಿಗಳು ಸದನಕ್ಕೆ ನುಗ್ಗಿ ಕಲರ್ ಸ್ಪ್ರ‍ೇ ಬಳಸಿದ ಘಟನೆ ನಡೆದಿದೆ. ಇದೀಗ ಈ ಕೃತ್ಯವೆಸಗಿದ ದುಷ್ಕರ್ಮಿಗಳ ಪತ್ತೆಯಾಗಿದೆ.

ಸಾಗರ್ ಶರ್ಮಾ ಹಾಗೂ ವಿದ್ಯಾರ್ಥಿ ಮನೋರಂಜನ್ ಎಂದು ಗುರುತಿಸಲಾಗಿದೆ. ಇಬ್ಬರೂ ಮೈಸೂರು ಮೂಲದವರು ಎನ್ನಲಾಗಿದ್ದು, ಮನೋರಂಜನ್ ಇಂಜಿನಿಯರಿಂಗ್ ವಿದ್ಯಾರ್ಥಿ ಎಂದು ತಿಳಿದುಬಂದಿದೆ.

ಇಬ್ಬರು ದುಷ್ಕರ್ಮಿಗಳನ್ನು ಸಂಸತ್ ಭವನ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಇದೇ ವೇಳೆ ಸಂಸತ್ ಭವನದ ಹೊರಗೆ ಕಲರ್ ಸ್ಪ್ರೇ ಹರಡಿ ಪ್ರತಿಭಟನೆ ನಡೆಸುತ್ತಿದ್ದ ಹರ್ಯಾಣ ಮೂಲದ ಯುವತಿ ನೀಲಮ್ ಹಾಗೂ ಮಹಾರಾಷ್ಟ್ರ ಮೂಲದ ಅಮೋಲ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.


Home add -Advt

Related Articles

Back to top button