
ಪ್ರಗತಿವಾಹಿನಿ ಸುದ್ದಿ: ಗುತ್ತಿಗೆದಾರನಿಂದ ಲಂಚ ಪಡೆಯುತ್ತಿದ್ದಾಗಲೇ ಬೆಸ್ಕಾಂ ಇಇ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.
ಕಾಮಗಾರಿ ಅನುಷ್ಟಾನಕ್ಕೆ ಕಾರ್ಯಾದೇಶ ನೀಡಲು ವಿದ್ಯುತ್ ಗುತ್ತಿಗೆದಾರನಿಂದ 3.50 ಲಕ್ಷ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಚಿತ್ರದುರ್ಗ ಬೆಸ್ಕಾಂ ವಿಭಾಗದ ಎಕ್ಸಿಕುಟಿವ್ ಇಂಜಿನಿಯರ್ ತಿಮ್ಮರಾಯಪ್ಪನನ್ನು ಬಂಧಿಸಿದ್ದಾರೆ.
ಹತ್ತು ಕಾಮಗಾರಿಗಳಿಗೆ ಕಾರ್ಯಾದೇಶ ನೀಡಲು ಶೇ.10ರಷ್ಟು ಲಂಚ ನೀಡುವಂತೆ ತಿಮ್ಮರಾಯಪ್ಪ ಬೇಡಿಕೆ ಇಟ್ಟಿದ್ದರು. ಗುತ್ತಿಗೆದಾರ ಸಂಜಯ್ ಲೋಕಾಯುಕ್ತಕ್ಕೆ ಮಾಹಿತಿ ನೀಡಿದ್ದರು. ಗುತ್ತಿಗೆದಾರನಿಂದ ಲಂಚದ ಹಣ ಪಡೆಯುತ್ತಿದ್ದಾಗಲೇ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಇಂಜಿನಿಯರ್ ನನ್ನು ಬಂಧಿಸಿದ್ದಾರೆ.