Kannada NewsKarnataka NewsNationalPolitics

*ರಾಜ್ಯದಲ್ಲಿ ಲೋಕಾಯುಕ್ತ ಬಿಗ್ ರೇಡ್*

ಪ್ರಗತಿವಾಹಿನಿ ಸುದ್ದಿ: ಬೆಂಗಳೂರಿನ 4 ಕಡೆ ಸೇರಿದಂತೆ ರಾಜ್ಯದ ಹಲವೆಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡುವ ಮೂಲಕ ಭ್ರಷ್ಟರಿಗೆ ಬಿಸಿಮುಟ್ಟಿಸಿದ್ದಾರೆ

ರಾಜ್ಯದಲ್ಲಿ ದಾಳಿ

ಯಾದಗಿರಿಯ ವಿದ್ಯುತ್ ಇಲಾಖೆಯ ಉಪ ವಿದ್ಯುತ್ ಪರಿವೀಕ್ಷಕ ವೀರೇಶ್ ಹಿರೇಮಠ, ಮಂಡ್ಯದ ಲೋಕೋಪಯೋಗಿ ಇಲಾಖೆಯ ಮಂಡ್ಯ ಉಪವಿಭಾಗದ ಎಎಇ ಎಸ್ ಸತೀಶ್, ಧಾರವಾಡದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾ ಎಂ.ಕೆ. ಸುರಕೋಡ, ಹಾಸನ ಮಹಾನಗರ ಪಾಲಿಕೆಯ ಎಎಇ ಎಂ.ಸಿ ಸತ್ಯನಾರಾಯಣ, ಮೈಸೂರಿನ, ಜಲ ಭವನದ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಎಎಇ ಮತ್ತು ಇಇ ಆಸಿಫ್ ಇಕ್ಬಾಲ್ ಹಾಗೂ ವಿಜಯಪುರದ ಕೃಷ್ಣಾ ಭಾಗ್ಯ ಜಲ ನಿಗಮದಲ್ಲಿ ಕಿರಿಯ ಇಂಜಿನಿಯರ್ ಆಗಿರುವ ಪ್ರಕಾಶ್ ಪಿ.ಜಿ ಮನೆಗಳ ಮೇಲೂ ಲೋಕಾಯುಕ್ತ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.

ಬೆಂಗಳೂರಿನಲ್ಲಿ ದಾಳಿ

ಕೆಆರ್‌ಐಡಿಎಲ್ ಚೀಫ್ ಎಂಜಿನಿಯರ್ ವಸಂತ್ ವಿ ನಾಯಕ್, ಬಿಡಿಎ ವ್ಯಾಪ್ತಿಯ ಆರ್‌ಎಫ್‌ಓ ಡಾಲೇಶ್, ರೈತ ಸೇವಾ ಸಹಕಾರ ಸಂಘದ ಸಿಇಓ ಶಶಿಧರ್ ಮನೆ, ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button