
ಪ್ರಗತಿವಾಹಿನಿ ಸುದ್ದಿ, ಖಾನಾಪುರ – ಖಾನಾಪುರದ ಘಸ್ಟೋಳ್ಳಿ – ದಡ್ಡಿ ರಸ್ತೆಯ ಶಿವಾಜಿನಗರದ ಜನರ ಬಹುಕಾಲದ ಬೇಡಿಕೆಯನ್ನು ಬಿಜೆಪಿ ಗ್ರಾಮೀಣ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಡಾ.ಸೋನಾಲಿ ಸರ್ನೋಬತ್ ಈಡೇರಿಸಿದ್ದಾರೆ.

ಡಾ ಸೋನಾಲಿ ಅವರು ಕೆಎಸ್‌ಆರ್‌ಟಿಸಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಶಿವಾಜಿ ನಗರದಲ್ಲಿ ಬಸ್ ನಿಲುಗಡೆಯ ವ್ಯವಸ್ಥೆ ಮಾಡಿಸಿದರು.
ಶನಿವಾರದಿಂದ ಬಸ್ ನಿಲುಗಡೆ ಆರಂಭವಾಗಿದ್ದು, ಸ್ಥಳಕ್ಕೆ ತೆರಳಿದ ಸೋನಾಲಿ ಸರ್ನೋಬತ್, ಬಸ್ ಗೆ ಪೂಜೆ ಸಲ್ಲಿಸಿ, ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರೊಂದಿಗೆ ಖುಷಿ ಹಂಚಿಕೊಂಡರು.
ಡಾ.ಸೋನಾಲಿ ಸರ್ನೋಬತ್, ವಾಸು ತಿಪ್ಪನವರ, ಸಂಜು ಚುಂಗಡೆ, ಮೇಘಾ ಮಡ್ಡಿಮನಿ, ರಚನಾ ಗೌಡರ್, ಕುತ್ರೆ ಸರ್, ಅಶೋಕ್ ಹೆರೇಕರ, ಬಸವರಾಜ ಕಡೇಮನಿ, ಭಾರತಿ ತಕಡಿ, ವಿನಾಯಕ ನಾಯ್ಕ ಹಾಗೂ ವಿದ್ಯಾರ್ಥಿಗಳು, ಪುರುಷರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
https://pragati.taskdun.com/belagavi-sp-phone-in-programme-held-successfully/