Belagavi NewsBelgaum NewsEducationKarnataka News
*ಬೆಳಗಾವಿಯಿಂದ ಪ್ರವಾಸಕ್ಕೆ ತೆರಳಿದ್ದ ಬಸ್ ಪಲ್ಟಿ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿಯಿಂದ ಮೈಸೂರಿಗೆ ಪ್ರವಾಸಕ್ಕೆ ಹೊಗಿದ್ದ ಶಾಲಾ ಬಸ್ ಡಿವೈಡರ್ಗೆ ಡಿಕ್ಕಿಯಾಗಿ ಪಲ್ಟಿಯಾಗಿ ಬಿದ್ದಿದೆ. ಈ ಅಪಘಾತದಲ್ಲಿ ಬಸ್ ನಲ್ಲಿ ಇದ್ದ ಮಕ್ಕಳಿಗೆ ಗಾಯಗಳಾಗಿವೆ.
ಮೈಸೂರು ಪ್ರವಾಸ ಮುಗಿಸಿ ಬೆಳಗಾವಿಗೆ ಹಿಂದಿರುಗುವಾಗ ಮೈಸೂರಿನ ಫೌಂಟೇನ್ ವೃತ್ತದ ಬಳಿ ಘಟನೆ ನಡೆದಿದೆ. ಪರಿಣಾಮ 10ಕ್ಕೂ ಹೆಚ್ಚು ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಘಟನೆ ವೇಳೆ ಬಸ್ನಲ್ಲಿ ಸುಮಾರು 30 ಮಕ್ಕಳು ಇದ್ದರು ಎನ್ನಲಾಗಿದೆ. ಬೆಳಗಾವಿ ಜಿಲ್ಲೆ ಖಾನಾಪುರ ಪಟ್ಟಣದ ಶಾಂತಿನಿಕೇತನ ಶಾಲೆಯ ಮಕ್ಕಳು ಶಿಕ್ಷಕರೊಂದಿಗೆ ಮೈಸೂರು ಪ್ರವಾಸಕ್ಕಾಗಿ ಬಂದಿದ್ದರು. ಪ್ರವಾಸಿ ತಾಣಗಳನ್ನು ವೀಕ್ಷಿಸಿ ವಾಪಸ್ ತೆರಳುವಾಗ ಘಟನೆ ಸಂಭವಿಸಿದೆ. ಗಾಯಾಳು ಮಕ್ಕಳನ್ನು ಮೈಸೂರಿನ ಕೆ.ಆರ್ ಆಸ್ಪತ್ರೆಗೆ ದಾಖಲಿಸಲಾಗಿದೆ.



