
ಪ್ರಗತಿವಾಹಿನಿ ಸುದ್ದಿ: ಡಿಸೇಲ್ ದರ ಏರಿಕೆ ಖಂಡಿಸಿ ಹಾಗೂ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯದಲ್ಲಿ ಇಂದು ಮಧ್ಯರಾತ್ರಿಯಿಂದ ಲಾರಿ ಮುಷ್ಕರ ಆರಂಭವಾಗಲಿದೆ.
ಇಂದು ಮಧ್ಯರಾತ್ರಿ 12 ಗಂಟೆಯಿಂದ ಅನಿರ್ಧಿಷ್ಟಾವಧಿವರೆಗೆ ಲಾರಿಗಳು ರಸ್ತೆಗಿಳಿಯಲ್ಲ. ರಾಜ್ಯಾದ್ಯಂತ ಸರಕು ಸಾಗಾಣೆ ಸ್ಥಗಿತಗೊಳ್ಳಲಿದೆ. ಸುಮಾರು 6 ಲಕ್ಷಕ್ಕೂ ಅಧಿಕ ಲಾರಿಗಳು ಇಂದು ರತರಿಯಿಂದ ಸೇವೆ ಬಂದ್ ಮಾಡಲಿವೆ.
6 ತಿಂಗಳಲ್ಲಿ ಸರ್ಕಾರ ಎರದು ಬಾರಿ ಡೀಸೆಲ್ ದರ ಏರಿಸಿದೆ. ತಕ್ಷಣ ಡೀಸೆಲ್ ದರ ಇಳಿಸಬೇಕು. ಸರಕು ಸಾಗಣೆ ಲಾರಿಗಳಿಗೆ ಬೆಂಗಳೂರು ನಗರ ನೋ ಎಂಟ್ರಿ ಆದೇಶ ಹಿಂಪಡೆಯಬೇಕು, ಲಾರಿ ಚಾಲಕರ ಮೇಲಿನ ಹಲ್ಲೆ ನಿಲ್ಲಬೇಕು ಸೇರಿದಂತೆ ವಿವಿಧ ಬೇಡಿಕೆ ಮುಂದಿಟ್ಟುಕೊಂಡು ಲಾರಿ ಮುಷ್ಕರ ಆರಂಭವಾಗಲಿದೆ. ಮಧ್ಯರಾತ್ರಿಯಿಂದ ರಾಜ್ಯಾದ್ಯಂತ ಲಾರಿ ಸಂಚಾರ ಬಂದ್ ಆಗಲಿದೆ ಎಂದು ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ ತಿಳಿಸಿದ್ದಾರೆ.