*ಕಳೆದುಹೋದ ಮೋಬೈಲ್ ಪತ್ತೆ: 110 ಮೋಬೈಲ್ ಫೋನ್ ಗಳು ಹಸ್ತಾಂತರ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಅಥಣಿ ಉಪವಿಭಾಗದಲ್ಲಿ ಕಳೆದುಹೋದ ಮೂಬೈಲಗಳನ್ನು ಸಿ ಇ ಐ ಆರ್ ಪೋರ್ಟಲ್ ಮೂಲಕ ಪತ್ತೆ ಮಾಡಿ ಸುಮಾರು 110 ಜನ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ.
ಇತ್ತಿಚೀನ ದಿನಗಳಲ್ಲಿ ಮೋಬೈಲ್ ಪೋನಗಳ ಬಳಕೆ ಹೆಚ್ಚಾದಂತೆ ಮೋಬೈಲ್ ಪೋನಗಳು ಕಳೆದು ಹೋಗುವ ಪ್ರಕರಣಗಳು ಹೆಚ್ಚಾಗುತ್ತಿದ್ದು ಇದ್ದನ್ನು ಗಂಭಿರವಾಗಿ ಪರಿಗಣಿಸಿರುವ ಕರ್ನಾಟಕ ರಾಜ್ಯ ಪೊಲೀಸ ಇಲಾಖೆಯು ಸಾರ್ವಜನಿಕರ ಆಸ್ತಿಯನ್ನು ರಕ್ಷಿಸಲು ಮತ್ತು ಕಳೆದುಹೋದ ಮೋಬೈಲಗಳನ್ನು ಶೀಘ್ರವಾಗಿ ಪತ್ತೆ ಮಾಡಲು ಅತ್ಯಾದುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಕಳೆದು ಹೋದ ಮೋಬೈಲಗಳನ್ನು ಪತ್ತೆ ಮಾಡುತ್ತಿದ್ದಾರೆ.
ಅಥಣಿ ಡಿಎಸ್ ಪಿ ಪ್ರಶಾಂತ ಮುನ್ನೊಳ್ಳಿ ಮಾರ್ಗದರ್ಶನದಲ್ಲಿ ತಂಡ ರಚಿಸಿ ಕಳೆದ ಎರಡು ವರ್ಷಗಳಲ್ಲಿ ಕಳೆದುಹೋದ 917 ಮೋಬೈಲಗಳಲ್ಲಿ ಪತ್ತೆಯಾದಂತಹ 460 ಮೋಬೈಲಗಳಲ್ಲಿ 260 ಮೋಬೈಲಗಳನ್ನು ವಶಪಡಿಸಿಕೊಳ್ಳಲಾಗಿದೆ.
ಹಂತ ಹಂತವಾಗಿ ಠಾಣಾ ಮಟ್ಟದಲ್ಲಿ ವಾರಸುದಾರರಿಗೆ ಹಿಂದಿರುಗಿಸಿದ್ದು, ಉಳಿದ 110 ಮೊಬೈಲ್‌ಗಳನ್ನು ಪತ್ತೆ ಮಾಡಿ ಮರಳಿಸಲಾಗಿದೆ.
ಅಥಣಿ ಪೊಲೀಸ್ ಠಾಣೆ-37, ಐಗಳಿ ಪೊಲೀಸ್ ಠಾಣೆ-20, ಕಾಗವಾಡ ಪೊಲೀಸ್ ಠಾಣೆ-20, ಹಾರೂಗೆರಿ ಪೊಲೀಸ್ ಠಾಣೆ-10, ಕುಡಚಿ ಪೊಲೀಸ್ ಠಾಣೆ-10, ರಾಯಬಾಗ ಪೊಲೀಸ್ ಠಾಣೆ-13, ಹೀಗೆ ಒಟ್ಟು-110 ಮೋಬೈಲ್ ಪೋನಗಳನ್ನು ಪತ್ತೆ ಮಾಡಿ ವಾರಸುದಾರರಿಗೆ ಹಿಂದಿರುಗಿಸಲಾಗಿದೆ.
ಮುಂದುವರೆದು ಪ್ರತಿ ಪೊಲೀಸ್ ಠಾಣಾ ಮಟ್ಟದಲ್ಲಿ ಕಳುವಾದ ಮೋಬೈಲ್ ಪತ್ತೆ ಮಾಡಲು ಒಬ್ಬ ನುರಿತ ಸಿಬ್ಬಂದಿಯನ್ನು ನಿಯೋಜಿಸುವುದರ ಮೂಲಕ ಇನ್ನುಳಿದ ಮೋಬೈಲಗಳನ್ನು ಪತ್ತೆ ಹಚ್ಚುವ ಕಾರ್ಯ ಮುಂದುವರೆಸಲಾಗಿದೆ.




