ಬರ್ರಿ ಶೆಟ್ಟರ್ ಉಂಡು ಹೋಗ್ರಿ… ಬೆಳಗಾವಿ ಬಿಟ್ಟಿ ಬಿದ್ದೈತಿ: ಜಗದೀಶ್ ಶೆಟ್ಟರ್ ವಿರುದ್ಧ ಜೋರಾಯ್ತು ಬಿಜೆಪಿ ಪ್ರತಿಭಟನೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಬಹುತೇಕ ಖಚಿತವಾಗುತ್ತಿದ್ದಂತೆ ಅವರ ವಿರುದ್ಧ ಬಿಜೆಪಿ ಮುಖಂಡರು, ಕಾರ್ಯಕರ್ತರ ಪ್ರತಿಭಟನೆ ಜೋರಾಗಿದೆ. ಗಲ್ಲಿ ಗಲ್ಲಿಗಳಲ್ಲಿ ಚರ್ಚೆ ನಡೆಯುತ್ತಿದ್ದು, ಬಿಜೆಪಿ ಹೈಕಮಾಂಡ್ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.
ಬಿಜೆಪಿ ಮುಖಂಡರು ಹೊರಗಿನವರಿಗೆ ಟಿಕೆಟ್ ನೀಡುವುದನ್ನು ವಿರೋಧಿಸಿ ಸಭೆಯನ್ನೂ ನಡೆಸಿದ್ದಾರೆ. ಆದರೆ ಈ ಸಭೆ ಕುರಿತಂತೆ ಗೇಲಿ ಮಾಡಿದ್ದ ಶೆಟ್ಟರ್, 17 ಲಕ್ಷ ಮತದಾರರಿರುವಾಗಿ 7 -8 ಮುಖಂಡರು ಯಾವಲೆಕ್ಕ ಎನ್ನುವ ರೀತಿಯಲ್ಲಿ ಪ್ರಶ್ನಿಸಿದ್ದರು. ಇದೀಗ ಶೆಟ್ಟರ್ ವಿರುದ್ಧ ಎಲ್ಲೆಡೆ ಪ್ರತಿಭಟನೆ, ಪೋಸ್ಟರ್ ಅಭಿಯಾನ ಶುರುವಾಗಿದೆ. #Gobackshettar ಎನ್ನುವ ಅಭಿಯಾನ ಜೋರಾಗಿದೆ.
ಬೆಳಗಾವಿ ನಗರದ ವಿವಿಧೆಡೆ ಬುಧವಾರ ಮತ್ತಷ್ಟು ಬ್ಯಾನರ್ ಗಳು ಕಾಣಿಸಿಕೊಂಡಿವೆ. `ಬರ್ರಿ ಶೆಟ್ಟರ್… ಉಂಡು ಹೋಗರಿ, ಬೆಳಗಾವಿ ನಿಮ್ಮಂತವರಿಗೆ ಬಿಟ್ಟಿ ಬಿದ್ದೈತಿ’ ಎಂದು ಬರೆಯಲಾಗಿರುವ ಬ್ಯಾನರ್ ಗಳು ಎಲ್ಲೆಡೆ ರಾರಾಜಿಸುತ್ತಿವೆ. ಕೆಳಗಡೆ #Go back Shettar ಎಂದೂ ಬರೆಯಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ