Kannada NewsKarnataka NewsLatest

*ಕರಾವಳಿಯಲ್ಲಿ ಸಂಚಲನ ಸೃಷ್ಟಿಸಿದ ಮತ್ತೊಂದು ಲವ್ ಜಿಹಾದ್ ಪ್ರಕರಣ*

ಪ್ರಗತಿವಾಹಿನಿ ಸುದ್ದಿ: ಹಿಂದೂ ಯುವತಿಯೊಬ್ಬಳು ಮುಸ್ಲೀಂ ಯುವಕನೊಂದಿಗೆ ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಈ ಘಟನೆ ನಡೆದಿದ್ದು, ಕರಾವಳಿಯಲ್ಲಿ ಲವ್ ಜಿಹಾದ್ ಪ್ರಕರಣ ಮತ್ತೆ ಸಂಚಲನ ಸೃಷ್ಟಿಸಿದೆ. ಕೇರಳದ ಕಾಸರಗೋಡು ಮೂಲದ ಯುವತಿ, ಮಂಗಳೂರಿನ ಸುರತ್ಕಲ್ ಅನ್ಯಕೋಮಿನ ಯುವಕನೊಂದಿಗೆ ಪರಾರಿಯಾಗಿರುವ ಆರೋಪ ಕೇಳಿಬಂದಿದೆ.

ಮಗಳನ್ನು ಮರಳಿ ಮನೆಗೆ ಕಳುಹಿಸುವಂತೆ ಹೆತ್ತವರು ಕಣ್ಣೀರು ಹಾಕುತ್ತಿದ್ದಾರೆ. ಮಂಗಳೂರಿನ ಮುಕ್ಕದಲ್ಲಿ ಕ್ರಿಮಿನಾಲಜಿ ಓದುತ್ತಿದ್ದ ಯುವತಿ ಸುರತ್ಕಲ್ ನ ಜ್ಯುವೆಲ್ಲರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮೊಹಮ್ಮದ್ ಮುದ್ಲಾಜ್ ಜೊತೆ ಓಡಿಹೋಗಿದ್ದಾಳೆ ಎನ್ನಲಾಗಿದೆ. ಇಬ್ಬರೂ ಕೇರಳದ ವಯನಾದಿನಲ್ಲಿದ್ದಾರೆ ಎಂದು ತಿಳಿದುಬಂದಿದೆ.

Home add -Advt

ವಿಷಯ ತಿಳಿಯುತ್ತಿದ್ದಂತೆ ವಿದೇಶದಿಂದ ಆಗಮಿಸಿರುವ ಯುವತಿಯ ತಂದೆ ವಿಶ್ವನಾಥ್, ಮಗಳಿಗೆ ವಾಪಸ್ ಬರುವಂತೆ ಮನವಿ ಮಾಡಿದ್ದಾರೆ. ವಿಶ್ವನಾಥ್ ಹಾಗೂ ಪತ್ನಿ ಲತಾ, ವಯನಾಡ್ ವರೆಗೂ ಹೋಗಿ ಮಗಳಿಗೆ ಬರುವಂತೆ ಹೇಳಿದರೆ ಆಕೆ ಬರಲು ಒಪ್ಪಿಲ್ಲ ಎನ್ನಲಾಗಿದೆ.

ವಯನಾಡ್ ಪೊಲೀಸರಿಗೆ ದೂರು ನೀಡಿದರೆ ಅವರು ಕೂಡ ಮಿದ್ಲಾಜ್ ಗೆ ಬೆಂಬಲ ನೀಡುತ್ತಿದ್ದಾರೆ. ನಮಗೆ ಐದು ನಿಮಿಷ ಮಾತನಾಡಲೂ ಬಿಟ್ಟಿಲ್ಲ ಎಂದು ಯುವತಿಯ ಪೋಷಕರು ಆರೋಪಿಸಿದ್ದಾರೆ. ಇತ್ತ ಸುರತ್ಕಲ್ ಠಾಣೆಯಲ್ಲಿಯೂ ಯುವತಿಯ ಪೋಷಕರು ದೂರು ಕೊಟ್ಟಿದ್ದಾರೆ. ದಯವಿಟ್ಟು ವಾಪಸ್ ಬಾ ಮಗಳೇ ಎಂದು ಮನವಿ ಮಾಡಿದ್ದಾರೆ. ಅಲ್ಲದೇ ನಮ್ಮ ಮಗಳು ನಮಗೆ ಬೇಕು ಎಂದು ಕಣ್ಣೀರಿಟ್ಟಿದ್ದಾರೆ.

Related Articles

Back to top button