ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ದೇಶದಲ್ಲಿ ನಡೆಯುವ ಬಹುತೇಕ ವಿಚ್ಛೇದನಗಳಿಗೆ ಪ್ರೇಮ ವಿವಾಹ ಕಾರಣ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಸುಪ್ರೀಂ ಕೋರ್ಟ್ ನ ಬಿ.ಆರ್. ಗವಾಯಿ ಮತ್ತು ಸಂಜಯ್ ಕರೋಲ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ಕೌಟುಂಬಿಕ ಸಮಸ್ಯೆಯೊಂದಕ್ಕೆ ಸಂಬಂಧಿಸಿದ ಪ್ರಕರಣದ ಇತ್ಯರ್ಥದ ವೇಳೆ ಈ ರೀತಿ ಅಭಿಪ್ರಾಯ ವ್ಯಕ್ತಪಡಿಸಿದೆ.
ಇದೇ ವೇಳೆ ಪೀಠ ದಂಪತಿ ಮಧ್ಯದ ವಿವಾದವನ್ನು ರಾಜೀ ಒಪ್ಪಂದದ ಮೂಲಕ ಇತ್ಯರ್ಥಕ್ಕೆ ಸೂಚಿಸಿದೆ. ನಿಗದಿತ ಕಾಲಸೂಚಿಯೊಳಗೆ ಒಪ್ಪಿಗೆಯಾಗದಿದ್ದರೆ ಸಂವಿಧಾನದ ಪರಿಚ್ಛೇದ 142ರ ಅಡಿ ವಿಚ್ಛೇದನ ಪಡೆಯಬಹುದು ಎಂದು ತಿಳಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ