Kannada NewsKarnataka NewsLatest

*ಮದುವೆಯಾಗುವುದಾಗಿ ನಂಬಿಸಿ ಗೋವಾಕ್ಕೆ ಕರೆದೊಯ್ದು ಪ್ರಿಯತಮೆಯನ್ನು ಹತ್ಯೆಗೈದ ಕಿರಾತಕ*

ಪ್ರಗತಿವಾಹಿನಿ ಸುದ್ದಿ: ಮದುವೆಯಾಗುವುದಾಗಿ ಹೇಳಿ ಗೆಳತಿಯನ್ನು ಗೋವಾಕ್ಕೆ ಕರೆದೊಯ್ದ ಪಾಗಲ್ ಪ್ರೇಮಿ, ಬಳಿಕ ಆಕೆಯ ಕತ್ತು ಸೀಲಿ ಕೊಲೆಮಡಿರುವ ಘಟನೆ ನಡೆದಿದೆ.

Related Articles

ಬೆಂಗಳೂರಿನ ರೋಷಿಣಿ ಮೋಸೆಸ್ (22) ಕೊಲೆಯಾಅ ಯುವತಿ. ಸಂಜಯ್ ಕೆವಿನ್ (22) ಪ್ರೊಯತಮೆಯನ್ನೇ ಕೊಂದ ಪ್ರಿಯಕರ. ಇಬ್ಬರೂ ಬೆಂಅಗ್ಳೂರು ನಿವಾಸಿಗಳು.

ಜೂನ್ 25ರಂದು ಗೊವಾದಲ್ಲಿ ಮದುವೆಯಾಗಲೆಂದು ಇಬ್ಬರೂ ಬೆಂಗಳೂರಿನಿಂದ ಗೋವಾಕ್ಕೆ ಬಸ್ ನಲ್ಲಿ ತೆರಳಿದ್ದಾರೆ. ಇಬ್ಬರ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿದೆ. ಬಳಿಕ ಇಬ್ಬರೂ ಪಿಲಿಯೆಮ್-ಧರ್ಬಂದೋರಾದಲ್ಲಿ ಬಸ್ ನಿಂದ ಇಳಿದಿದ್ದಾರೆ. ಸಂಜಯ್, ರೋಷಿಯನ್ನು ಕಾಡಿಗೆ ಕರೆದೊಯ್ದಿದ್ದಾನೆ. ಅಲ್ಲಿ ಚಾಕುವಿನಿಂದ ಆಕೆಯ ಗಂಟಲು ಸೀಳಿ ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾನೆ.

Home add -Advt

ಗೋವಾದ ಪ್ರತಾಪ್ ನಗರದ ಅರಣ್ಯ ಪ್ರದೇಶದಲ್ಲಿ ಅಪರಿಚಿತ ಯುವತಿಯ ಶವ ಪತ್ತೆಯಾಗಿದೆ. ಶವದ ಪಕ್ಕದಲ್ಲಿದ್ದ ಪರ್ಸ್ ಪರಿಶೀಲಿಸಿದಾಗ ಅದರಲ್ಲಿ ಹುಬ್ಬಳ್ಳಿಯ ಬಸ್ ಟಿಕೆಟ್ ಇತ್ತು. ಬಳಿಕ ಅದರಲ್ಲಿದ್ದ ಫೋಟೋ, ದಾಖಲೆಗಳನ್ನು ಪರಿಶೀಲಿಸಿದಾಗ ಮೃತ ಯುವತಿ ಬೆಂಗಳೂರು ಮೂಲದವಳು ಎಂಬುದು ಗೊತ್ತಾಗಿದೆ. ತನಿಖೆ ನಡೆಸಿದ ಪೊಲೀಸರಿಗೆ ಯುವತಿ ಸಂಜಯ್ ಎಂಬಾತನನ್ನು ಪ್ರೀಟಿದ್ಸುತ್ತಿದ್ದಳು ಎಂಬುದು ತಿಳಿದುಬಂದಿದೆ.

ಆರೋಪಿ ಸಂಜಯ್ ಪತ್ತೆಗಾಗಿ ಹುಡುಕಾಟ ನಡೆಸಿದ ಪೊಲೀಸರು ಹುಬ್ಬಳ್ಳಿಯಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.


Related Articles

Back to top button