Film & EntertainmentKarnataka News

*ರಚಿತಾ ರಾಮ್ ವಿರುದ್ಧ ಸಾಲು ಸಾಲು ಚಿತ್ರತಂಡಗಳಿಂದ ದೂರು ದಾಖಲು*

ಪ್ರಗತಿವಾಹಿನಿ ಸುದ್ದಿ: ಡಿಂಪಲ್ ಕ್ವೀನ್ ರಚಿತಾ ರಾಮ್ ವಿರುದ್ಧ ಸಾಲು ಸಾಲು ಚಿತ್ರತಂಡಗಳು ಫಿಲ್ಮ್ ಚೇಂಬರ್ ಗೆ ದೂರು ನೀಡಿರುವ ಘಟನೆ ನಡೆದಿದೆ.

ಸಂಜು ವೆಡ್ಸ್ ಗೀತಾ ಚಿತ್ರತಂಡ ನಟಿ ರಚಿತಾ ರಾಮ್ ಸಿನಿಮಾ ಪ್ರಚಾರಕ್ಕೆ ಬರಲಿಲ್ಲ ಎಂದು ಫಿಲ್ಮ್ ಚೇಂಬರ್ ಗೆ ದೂರು ನೀಡಿತ್ತು. ಅಲ್ಲದೇ ಈ ಬಗ್ಗೆ ನಟ ಶ್ರೀನಗರ ಕಿಟ್ಟಿ ಹಾಗೂ ನಿರ್ದೇಶಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಇದೀಗ ಮತ್ತೊಂದು ಚಿತ್ರ ತಂಡ ನಟಿ ರಚಿತಾ ರಾಮ್ ವಿರುದ್ಧ ದೂರು ನೀದಿರುವುದು ಬೆಳಕಿಗೆ ಬಂದಿದೆ.

Home add -Advt

ಉಪ್ಪಿ ರುಪ್ಪಿ ಸಿನಿಮಾದ ನಿರ್ಮಾಪಕರಾದ ವಿಜಯಲಕ್ಷ್ಮೀ ಅರಸ್ ನಟಿ ರಚಿತಾ ರಾಮ್ ವಿರುದ್ಧ ಫಿಲ್ಮ್ ಚೇಂಬರ್ ಗೆ ದೂರು ನೀಡಿದ್ದಾರೆ. ಉಪ್ಪಿ ರುಪ್ಪಿ ಸಿನಿಮಾಗೆ ಅಡ್ವಾನ್ಸ್ ಹಣ ಪಡೆದು ಚೀತ್ರೀಕರಣಕ್ಕೆ ಬಾರದೇ ರಚಿತಾ ರಾಮ್ ಸತಾಯಿಸಿದ್ದರೆ ಇದರಿಂದ ಒಂದೂವರೆಕೋಟಿಯಷ್ಟು ನಂಟವುಂಟಾಗಿದೆ ಎಂದು ದೂರಿದ್ದಾರೆ.

8 ವರ್ಷಗಳ ಹಿಂದೆ ಉಪೇಂದ್ರ ಹಾಗೂ ರಚಿತಾ ರಾಮ್ ಅಭಿನಯದಲ್ಲಿ ಉಪ್ಪಿ ರುಪ್ಪಿ ಚಿತ್ರ ಸೆಟ್ಟೇರಿತ್ತು. ವಿಜಯಲಕ್ಷ್ಮೀ ಅರಸ್ ನಿರ್ಮಾಣದ ಈ ಸಿನಿಮಾಅಗೆ ಕೆ.ಮಾದೇಶ್ ನಿರ್ದೇಶನ ಮಾಡುತ್ತಿದ್ದರು. ಈ ಸಿನಿಮಾದಲ್ಲಿ ನಟಿಸಲು ರಚಿತಾ ರಾಮ್ 23 ಲಕ್ಷ ಸಂಭಾವನೆಗೆ ಒಪ್ಪಿದ್ದರು. 13 ಲಕ್ಷ ರೂಪಾಯಿ ಅಡ್ವಾನ್ಸ್ ಪಡೆದಿದ್ದರು. 2017ರಲ್ಲಿ ಬ್ಯಾಂಕಾಕ್ ನಲ್ಲಿ ಶೂಟಿಂಗ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿತ್ತು. ಅಲ್ಲಿಗೆ ಶೂಟಿಂಗ್ ಗೆ ಬರುವುದಾಗಿಯೂ ರಚಿತಾ ರಾಮ್ ಒಪ್ಪಿದ್ದರು. ಅವರಿಗೆ ಫ್ಲೈಟ್ ಟಿಕೆಟ್ ಬುಕ್ ಮಾಡಲಾಗಿತ್ತು. ಆದರೆ ಶೂಟಿಂಗೆ ಬರುತ್ತೇನೆ ಎಂದು ಹೇಳಿ 15 ದಿನವಾದರೂ ಬಂದಿರಲಿಲ್ಲ. ಇಂದು ಬರುತ್ತೇನೆ ನಾಳೆ ಬರುತ್ತೇನೆ ಎಣ್ದು ಸತಾಯಿಸಿದ್ದಾರೆ. ಅವರಿಗೆಂದು ಪ್ರತಿದಿನ ಫ್ಲೈಟ್ ಟಿಕೆಟ್ ಬುಕ್ ಮಾಡಿ ಕಾದಿದ್ದಾಯಿತ. ಕೊನೆಗೂ ಅವರು ಬಾಂಕಾಕ್ ಗೆ ಬರಲಿಲ್ಲ. ಬೇರೆ ದಾರಿಯಿಲ್ಲದೇ ಕೇವಲ ಹೀರೋ ದೃಶ್ಯಗಳನ್ನಷ್ಟೇ ಚಿತ್ರೀಕರಿಸಿಕೊಂಡು ಚಿತ್ರತಂಡ ವಾಪಸ್ ಆಗಿತ್ತು.

ಮೈಸೂರಿನಲ್ಲಿ ನಡೆದ ಚಿತ್ರ‍ೀಕರಣದಲ್ಲಿ ರಚಿತಾ ರಾಮ್ ಕೇವಲ ಒಂದು ದಿನ ಮಾತ್ರ ಬಂದಿದ್ದರು. ರಚಿತಾ ರಾಮ್ ಕಾರಣಕ್ಕೆ ಉಪ್ಪಿ ರುಪ್ಪಿ ಚಿತ್ರ ಅರ್ಧಕ್ಕೆ ನಿಂತು ಹೋಯಿತು. ಶೇ35ರಷ್ಟು ಮಾತ್ರ ಸಿನಿಮಾ ಸಿದ್ಧವಾಗಿದೆ. ಉಳಿದ ಭಾಗ ಹಾಗೇ ಉಳಿದಿದೆ. ಈ ಬಗ್ಗೆ ನಿರ್ಮಾಪಕಿ ವಿಜಯಲಕ್ಷ್ಮೀ ಅರಸ್ ಫಿಲ್ಮ್ ಚೇಂಬರ್ ಗೆ ಎರಡು ತಿಂಗಳ ಹಿಂದೆಯೇ ದೂರು ನೀಡಿದ್ದಾರೆ ಎಂಬುದು ಈಗ ಬೆಳಕಿಗೆ ಬಂದಿದೆ.

https://pragativahini.com/lokayukta-raid-bbmp-officer-arrested


Related Articles

Back to top button