Kannada NewsKarnataka NewsLatest

*ಬಿಗ್ ಬಾಸ್ ಮಾಜಿ ಸ್ಪರ್ಧಿ ಗೋಲ್ಡ್ ಸುರೇಶ್ ವಿರುದ್ಧ ವಂಚನೆ ಆರೋಪ*

ಪ್ರಗತಿವಾಹಿನಿ ಸುದ್ದಿ: ಬಿಗ್ ಬಾಸ್ ಮಾಜಿ ಸ್ಪರ್ಧಿ ಗೋಲ್ಡ್ ಸುರೇಶ್ ವಿರುದ್ಧ ವಂಚನೆ ಆರೋಪ ಕೇಳಿಬಂದಿದೆ. ಕೇಬಲ್ ಚಾನಲ್ ಮಾಡುವುದಾಹಿ ಹೇಳಿ ಲಕ್ಷ ಲಕ್ಷ ಹಣ ಪಡೆದು ಮೋಸ ಮಾಡಿದ್ದಾರೆ ಎಂದು ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಮೈನುದ್ದೀನ್ ಎಂಬುವವರು ಆರೋಪಿಸಿದ್ದಾರೆ.

ಗೋಲ್ಡ್ ಸುರೇಶ್ ಕೇಬಲ್ ಚಾನಲ್ ಸೆಟಪ್ ಮಾಡುವುದಾಗಿ ಹೇಳಿ 14 ಲಕ್ಷಕ್ಕೆ ಒಪ್ಪಂದ ಮಾಡಿಕೊಂಡಿದ್ದರು. ನಾಲ್ಕು ಲಕ್ಷ ಮುಂಗಡವಾಗಿ ಪಡೆದಿದುಕೊಂಡಿದ್ದರು. ಆ ಬಳಿಕ ಹಂತ ಹಂತವಾಗಿ 7 ಲಕ್ಷ ರೂಪಾಯಿ ಸುರೇಶ್ ಗೆ ನೀಡಿದ್ದಾಗಿ ಮೈನುದ್ದೀನ್ ತಿಳಿಸಿದ್ದಾರೆ. 2017ರಲ್ಲಿ ಇಬ್ಬರ ನಡುವೆ ಒಪ್ಪಂದ ನಡೆದಿತ್ತು. ಆ ಬಳಿಕ ಸುರೇಶ್ ಅರೆಬರೆ ಕೆಲಸ ಮಾಡಿ ಅರ್ಧಕ್ಕೆ ಕೈಬಿಟ್ತರು. ಈಗ ಹಣವನ್ನೂ ಕೊಡದೇ, ಕೇಬಲ್ ಸೆಟಪ್ ಕೂಡ ಮಾಡದೇ ಮೋಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button