*ಲವ್-ಸೆಕ್ಸ್-ದೋಖಾ: ಮದುವೆಯಾಗುವುದಾಗಿ ನಂಬಿಸಿ ಯುವಕನಿಂದ ಮೋಸ: ಆರೋಪಿ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ಯುವತಿಯೊಬ್ಬಳನ್ನು ಮದುವೆಯಾಗುವುದಾಗಿ ನಂಬಿಸಿ ಲಕ್ಷ ಲಕ್ಷ ಹಣವನ್ನು ದೋಚಿ ವ್ಯಕ್ತಿಯೋರ್ವ ಕೈಕೊಟ್ಟ ಘಟನೆ ಬೆಳಕಿಗೆ ಬಂದಿದೆ.
ಹರಿಯಾಣ ಮೂಲದ ಶುಭಾಂಶು ಎಂಬಾತ ಬೆಂಗಳೂರಿನಲ್ಲಿ ವಾಸವಾಗಿದ್ದ. ಬೆಂಗಳೂರಿನ ಟಿ.ದಾಸರಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಐಷಾರಾಮಿ ಜೀವನ ನಡೆಸುತ್ತಿದ್ದ. ಹೀಗೆ ಮನೆ ಬಳಿಯ ಬಾಲಕಿಯೊಬ್ಬಳ ಪರಿಚಯ ಮಾಡಿಕೊಂಡ ಆಸಾಮಿ ಆಕೆಯ ಮನೆಗೆ ಭೇಟಿ ನೀಡಿ ಕುಟಿಂಬ್ವದವರ ಜೊತೆಯೂ ಪರಿಚಯವಾಗಿದ್ದಾನೆ. ಬಳಿಕ ಬಾಲಕಿಯ ಸಹೋದರಿಯನ್ನು ತನ್ನ ಬಲೆಗೆ ಬೀಳಿಸಿಕೊಂಡು ಮದುವೆ ಪ್ರಸ್ತಾಪವನ್ನೂ ಮಾಡಿದ್ದಾನೆ. ಬಳಿಕ ಪ್ರೀತಿ-ಪ್ರೇಮ ಎಂದು ನಾಟಕವಾಡಿ ಆಕೆಯನ್ನು ಖಾಸಗಿ ಫ್ಲಾಟ್ ನಲ್ಲಿ ಇರಿಸಿದ್ದಲ್ಲದೇ ಲಿವ್-ಇನ್-ರಿಲೇಷನ್ ಶಿಪ್ ನಲ್ಲಿ ಇರುವಂತೆ ಒಪ್ಪಿಸಿದ್ದಾನೆ.
ಆರಂಭದಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದು ಬಳಿಕ ಮದುವೆಯಾಗೋಣ ಎಂದು ನಂಬಿಸಿದ್ದಾನೆ. ಶುಭಾಂಶು ಮಾತು ನಂಬಿದ ಯುವತಿ ಮೋಸ ಹೋಗಿದ್ದಾಳೆ. ಯುವತಿಯಿಂದ ಎಲ್ಲವನ್ನೂ ದೋಚಿ ಬ್ಲ್ಯಾಕ್ ಮೇಲ್ ಆರಂಭಿಸಿದ ವ್ಯಕ್ತಿ ಲಕ್ಷ ಲಕ್ಷ ಹಣವನ್ನೂ ಪಡೆದುಕೊಂಡಿದ್ದಾನೆ. ಹೀಗೆ ವಂಚನೆ ಆರಂಭಿಸಿದ್ದ ಶುಭಾಂಶುಗೆ ಅದಾಗಲೇ ಬೇರೊಂದು ವಿವಾಹವೂ ಆಗಿದೆ ಎಂಬ ವಿಚಾರ ಯುವತಿಗೆ ಗೊತ್ತಾಗಿದೆ. ಮೋಸ ಹೋಗಿದ್ದು ಗೊತ್ತಾದ ಯುವತಿ ಶುಭಾಂಶು ವಿರುದ್ಧ ಬಾಗಲಗುಂಟೆ ಠಾಣೆಯಲ್ಲಿ ದೂರು ನೀಡಿದ್ದಾಳೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಶುಭಾಂಶುನನ್ನು ಬಂಧಿಸಿದ್ದಾರೆ.




